– ಸುಲಿಗೆಕೋರರ ಮನೆ ಮೇಲೆ ಎಸ್‍ಐಟಿ ದಾಳಿ
ಬೆಂಗಳೂರು: ರಮೇಶ್ ಜಾರಕಿಹೊಳಿ ಈಗಾಗಲೇ ಹೇಳಿರುವಂತೆ 4 ತಿಂಗಳಿಂದ ಈ ಸಿಡಿ ಬ್ಲಾಕ್‍ಮೇಲ್ ನಡೆದಿದೆ. ವೀಡಿಯೋ ಇಟ್ಟುಕೊಂಡು ರಮೇಶ್ ಬಳಿ ಸುಲಿಗೆಗೆ ಈ ಟೀಂ ಮುಂದಾಗಿತ್ತು ಎನ್ನಲಾಗಿದೆ.
Advertisement
ಇಂತಿಷ್ಟೇ ಹಣ ಬೇಕು ಅಂತ ಡೀಲ್ ಒಪ್ಪದಿದ್ದಾಗ, ಈ ತಂಡ ಕೊನೆಗೆ ಮಹಾನಾಯಕನ ಜೊತೆ ವ್ಯವಹಾರ ಕುದುರಿಸಿ, ಮಹಾನಾಯಕನ ಸೂಚನೆಯಂತೆ ವೀಡಿಯೋ ರಿಲೀಸ್ ಆಯ್ತಾ ಅನ್ನೋ ಅನುಮಾನ ಎದ್ದಿದೆ. ಈ ಡೀಲ್‍ನಲ್ಲಿ `ಸಿಡಿ’ಗೇಡಿಗಳಿಗೆ ಕಾಂಚಾಣದ ಹೊಳೆಯೇ ಹರಿದಿದೆ. ಸಾಮಾಜಿಕ ಕಾರ್ಯಕರ್ತನಿಗೆ ಸಿಡಿ ಕೊಟ್ಟ ರಾಮನಗರ ಮೂಲದ ಯುವತಿಗೆ 3 ಲಕ್ಷ ನೀಡಿರೋದು ಎಸ್‍ಐಟಿ ತನಿಖೆಯಲ್ಲಿ ಪತ್ತೆಯಾಗಿದೆ. ಸಿಡಿಯ ಕಿಂಗ್‍ಪಿನ್ ಹಾಗೂ ಶಿರಾ ಮೂಲದ ಯುವಕನಿಗೂ ಲಕ್ಷ ಲಕ್ಷ ಸಂದಾಯವಾಗಿದೆ. ಕಾರ್ ಶೋ ರೂಂಗೆ ತೆರಳಿದ್ದ ಶಿರಾದ ಯುವಕ 45 ಲಕ್ಷದ ಫಾಚ್ರ್ಯೂನರ್ ಕಾರ್ ಖರೀದಿಗೆ ಮುಂದಾಗಿದ್ದ ಎನ್ನಲಾಗಿದೆ.
Advertisement
Advertisement
ಭಾರೀ ಹಣದ ವರ್ಗಾವಣೆ ನಡೆದಿರೋದ್ರಿಂದ ಕಿಂಗ್‍ಪಿನ್‍ಗಳ ಖಾತೆಗಳನ್ನು ಬ್ಲ್ಯಾಕ್ ಮಾಡೋದಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಪಬ್ಲಿಕ್‍ಟಿವಿ ಜೊತೆ ಮಾತನಾಡಿರೋ ದಿನೇಶ್ ಕಲ್ಲಹಳ್ಳಿ, ನಿನ್ನೆ ವಿಚಾರಣೆ ನಡೆಸಿದ ಒಬ್ಬ ಮಾತ್ರ ಪರಿಚಯ. ಆದರೆ ಅವನು ನನಗೆ ಸಿಡಿ ತಂದು ಕೊಟ್ಟಿಲ್ಲ. ಸಿಡಿ ತಂದುಕೊಟ್ಟವ ಅಪರಿಚಿತ. ಎಸ್‍ಐಟಿ ನನಗೆ ನೋಟಿಸ್ ಕೊಟ್ಟರೆ ವಿಚಾರಣೆಗೆ ಹಾಜರಾಗ್ತೇನೆ ಅಂತ ಹೇಳಿದ್ರು. ಈ ಮಧ್ಯೆ ಸಿಡಿ ಕೇಸ್ ತನಿಖೆ ಬಗ್ಗೆ ಸಿಎಂ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ರು. ಬಳಿಕ ಮಾತನಾಡಿ, ಎಸ್‍ಐಟಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ತನಿಖೆ ನಡೀತಿರೋದ್ರಿಂದ ಹೆಚ್ಚಿಗೆ ಏನೂ ಮಾತಾಡಲ್ಲ ಅಂದ್ರು.