ಮಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯ, ಅದಕ್ಕೆ ಅವರೇ ಉತ್ತರ ಕೊಡಲಿ. ಅವರು ರಾಜೀನಾಮೆ ಕೊಡೋದು ಏನೂ ಆಗಿಲ್ಲ, ಅವರು ಹೀಗೇಯೇ ಮುಂದುವರಿಯೋದು ಸೂಕ್ತ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಜಾರಕಿಹೊಳಿಗೆ ಕಾಂಗ್ರೆಸ್ ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಬಂದವರು. ಬಿಜೆಪಿಯಲ್ಲಿ ಮೋಸ ಮಾಡಿದ್ದಾರೆ ಅಂದಿಲ್ಲ. ಅಂತಹ ಪ್ರಶ್ನೆಯೇ ಇಲ್ಲ, ಸಿಡಿ ಜಾಲ ಸೇರಿ ಬೇರೆ ಬೇರೆ ಕಾರಣಕ್ಕೆ ಈ ವಿದ್ಯಮಾನ ನಡೀತಿದೆ. ಬಿಜೆಪಿ ಪಕ್ಷದಲ್ಲಿ ಯಾರೂ ಅವರಿಗೆ ಮೋಸ ಮಾಡಿಲ್ಲ ಸರ್ಕಾರ ಅವರ ಪರವಾಗಿ ಅಂತಲ್ಲ, ಕಾನೂನು ಮತ್ತು ನ್ಯಾಯದ ಪರ ನಿಲ್ಲುತ್ತೆ. ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ತನಿಖೆ ನಡೀತಾ ಇದೆಜಾರಕಿಹೊಳಿ ಸಿಟ್ಟಿನಿಂದ ಆವತ್ತು ಸರ್ಕಾರ ಬಿದ್ದಿತ್ತು ಎಂದರು.
Advertisement
Advertisement
ಎಲ್ಲಾ ಸೀಝನ್ ಒಂದೇ ಥರ ಅಲ್ಲ, ಮೊದಲೆಲ್ಲಾ ಕೋವಿಡ್ ಇರಲಿಲ್ಲ. ಈಗ ಕೋವಿಡ್ ಬಂದು ಪರಿಸ್ಥಿತಿ ಬದಲಾಗಿದೆ ಆವಾಗ ಬೇರೆ ಇತ್ತು. ಆದ್ರೆ ಈಗ ಬಿಜೆಪಿಯಲ್ಲಿ ಆ ಥರದ ಸನ್ನಿವೇಶ ಇಲ್ಲ. ನಾನು ಅವರ ಸಾಮರ್ಥ್ಯ ಅಲೆಯಲ್ಲ, ಆದ್ರೆ ಪಕ್ಷದಲ್ಲಿ ಆ ಪ್ರಮೇಯ ಇಲ್ಲ. ಇಲ್ಲಿಂದ ಹೊರಗೆ ಹೋಗೋದು, ಒಳಗೆ ಬರೋದು ಇಲ್ಲ ಒಳಗೆ ಬರೋರು ಇದ್ದರೂ ಅವರಿಗೆ ಅವಕಾಶ ಕೊಡೋದು ಕಷ್ಟ. ಮುಂಬೈಗೆ ಹೋಗಿದ್ದು ಒಂದು ಪಕ್ಷದ ಸರ್ಕಾರ ತೆಗೆದು ಮತ್ತೊಂದು ಸರ್ಕಾರ ತರೋಕೆ. ಹೊಸ ಸರ್ಕಾರ ನಮಗೆ ಸ್ಥಾನಮಾನ ಕೊಟ್ಟಿದೆ. ಜಾರಕಿಹೊಳಿಯವರ ವೈಯಕ್ತಿಕ ಸಮಸ್ಯೆ. ಕಾಂಗ್ರೆಸ್ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಹಾಗೆ ಕನಸು ಕಾಣ್ತಿದೆ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ ಇದೆ, ಆದ್ರೆ ಅವರು ಆಡಳಿತಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.