ಬೆಂಗಳೂರು: ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹೌದು, ರಮೇಶ್ ಜಾರಕಿಹೊಳಿ ರೇಪ್ ಕೇಸ್ ಅಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ತನಿಖೆ ನಡೆಸ್ತಾ ಇರೋ ಎಸ್‍ಐಟಿ ಮುಖ್ಯಸ್ಥರೇ ದೀರ್ಘ ರಜೆಯ ಮೇಲೆ ಹೊರಗೆ ಉಳಿದಿದ್ದಾರೆ.
Advertisement
Advertisement
ಎಸ್ ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ವೈದ್ಯಕೀಯ ರಜೆಯ ಮೇಲೆ ಹೊರಗೆ ಉಳಿದಿದ್ದರು. ಈ ಮೂಲಕ ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಎಸ್‍ಐಟಿಯಿಂದ ತನಿಖೆ ನಡೆಯುತ್ತಾ ಇದ್ದರೂ ಎಸ್‍ಐಟಿ ಮುಖ್ಯಸ್ಥರೇ ಇಲ್ಲವಾಗಿದೆ. ಇದನ್ನೂ ಓದಿ: ಜಾರಕಿಹೊಳಿ ಕೇಸ್ ಆರೋಪಿಗಳಿಗೆ ಜಾಮೀನು
Advertisement
ಅನಾರೋಗ್ಯ ಕಾರಣದಿಂದಾಗಿ ಎಸ್‍ಐಟಿ ಮುಖ್ಯಸ್ಥರು ಸುದೀರ್ಘ ರಜೆಗೆ ಹೋಗಿದ್ದಾರೆ. ಆದರೆ ಈಗ ಈ ರಜೆಯ ಹಿಂದೆಯೇ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಒತ್ತಡ ಸಹಿಲಾರದೇ ರಜೆ ಮೇಲೆ ತೆರಳಿದ್ರಾ..? ಎಂಬ ಅನುಮಾನಗಳು ಕೂಡ ಇದೆ.
Advertisement
ಇಡೀ ಪ್ರಕರಣ ಬೇರೆ ರೀತಿ ಸಾಗುತ್ತಾ ಇದೆ. ಅದೇ ವಿಚಾರಕ್ಕೆ ಹೊರನಡೆದ್ರಾ..? ಈ ಅನುಮಾನಗಳು ಈಗ ಶುರುವಾಗಿದ್ದು, ಯಾವುದೇ ಮಾಹಿತಿಯನ್ನು ಹೊರಗೆ ಹಾಕಿಲ್ಲ. ಸೌಮೆಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖೆಯ ಜವಬ್ದಾರಿ ಹೊತ್ತಿದ್ದಾರೆ.