ದುಬೈ: ಭಾನುವಾರದ ಪಂದ್ಯವನ್ನು ಪಂಜಾಬ್ ತಂಡ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ವಿಂಡೀಸ್ ಆಟಗಾರ ಕ್ರಿಸ್ ಜೋರ್ಡಾನ್ ಓಡುವ ಭರದಲ್ಲಿ ಮಾಡಿದ ಎಡವಟ್ಟಿನಿಂದ ಎರಡು ಸೂಪರ್ ಓವರ್ ಆಡುವಂತಾಯಿತು.
ಹೌದು. 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ಗೆ ಕೊನೆಯ ಓವರ್‌ನಲ್ಲಿ 9 ರನ್ ಬೇಕಿತ್ತು. ಮುಂಬೈ ಪರ ಕೊನೆಯ ಓವರ್ ಬಾಲ್ ಮಾಡಲು ಬಂದಿದ್ದು ಟ್ರೆಂಟ್ ಬೌಲ್ಟ್. ಕ್ರೀಸ್‌ನಲ್ಲಿ ದೀಪಕ್ ಹೂಡಾ ಮತ್ತು ಕ್ರೀಸ್ ಜೋರ್ಡಾನ್ ಇದ್ದರು.
Advertisement
Chris Jordan ????????#MIvKXIP #Jordan#SuperOver pic.twitter.com/HKm8MAeLcs
— Mohit Chavan (@befikraaa_19) October 19, 2020
Advertisement
ಮೊದಲ ಎಸೆತದಲ್ಲಿ ಹೂಡಾ 1 ರನ್ ಹೊಡೆದರೆ ಎರಡನೇ ಎಸೆತವನ್ನು ಜೋರ್ಡಾನ್ ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ನಾಲ್ಕನೇಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಒಂದು ರನ್ ಬಂತು.
Advertisement
Chris Jordan was the orchestrator of the events which happened next to this ball????????
A good over in the second super over though ???? #KXIP #KXIPvsMI pic.twitter.com/8xmyX1z0oN
— Vaidyanath (@ydn_14) October 18, 2020
Advertisement
ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಬೌಲ್ಟ್ ಹಾಕಿದ ಯಾರ್ಕರ್ ಎಸೆತವನ್ನು ಜೋರ್ಡಾನ್ ಡೀಪ್ ಮಿಡ್‌ವಿಕೆಟ್ ಕಡೆ ಹೊಡೆದರು. ಒಂದು ರನ್ ಪೂರ್ಣಗೊಳಿಸಿದ ಜೋರ್ಡಾನ್ ಎರಡನೇ ರನ್ ಓಡುವಾಗ ಎಡವಟ್ಟು ಮಾಡಿದರು. ರನ್ ಕದಿಯುವಾಗ ವೇಳೆ ನೇರವಾಗಿ ಪಿಚ್ ಸ್ಟ್ರೈಕ್‌ನತ್ತ ಓಡದೇ ಎಡಗಡೆ ಇದ್ದ ಪಿಚ್‌ನತ್ತ ಓಡಿದರು. ಪರಿಣಾಮ ಪೋಲಾರ್ಡ್ ನೇರವಾಗಿ ವಿಕೆಟ್ ಕೀಪರ್‌ಗೆ ಎಸೆದರು. ಆ ಕ್ಷಣವನ್ನೇ ಕಾಯುತ್ತಿದ್ದ ಕ್ವಿಂಟನ್ ಡಿ ಕಾಕ್ ಬಾಲ್ ಕೈಗೆ ಸಿಕ್ಕಿದ ಕೂಡಲೇ ವಿಕೆಟಿಗೆ ಮುಟ್ಟಿಸಿದರು.
Chris Jordan wanted to visit Mars before reaching the other end before getting out. ????#KXIP #MIvKXIP #MI pic.twitter.com/CDzYbTpFoS
— Abhay Anand ???????? (@ABHAY_1987) October 18, 2020
ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಜೊತೆ ತೀರ್ಪು ಪ್ರಕಟಿಸುವಂತೆ ಕೇಳಿದರು. ಈಗ ಎರಡು ತಂಡಗಳಲ್ಲಿ ಆತಂಕ. ಸ್ಕ್ರೀನ್‌ನಲ್ಲಿ ಕ್ರೀಸ್ ಗೆರೆಗೆ ಕೆಲವೇ ಇಂಚು ಅಂತರದಲ್ಲಿರುವಾಗ ಬೇಲ್ಸ್ ಹಾರುವುದು ದೃಢವಾಯಿತು. ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದನ್ನೂ ಓದಿ: ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್ ಹ್ಯೂಮನ್ ಮಯಾಂಕ್
https://twitter.com/AbhishekEditz/status/1317893154478071808
ಒಂದು ವೇಳೆ ಜೋರ್ಡಾನ್ ನೇರವಾಗಿ ಓಡಿದ್ದರೆ 17 ಮೀಟರ್ ದೂರದಲ್ಲಿದ್ದ ಕ್ರೀಸ್ ಅನ್ನು ಸುಲಭವಾಗಿ ತಲುಪಬಹುದಿತ್ತು.ಆದರೆ ಅವರು 22 ಮೀಟರ್ ದೂರವನ್ನು ಓಡಿದ ಪರಿಣಾಮ ಪಂದ್ಯ ಸೂಪರ್ ಓವರಿಗೆ ಹೋಯ್ತು.