ಬೆಂಗಳೂರು: ಇದೇ ಫೆಬ್ರವರಿ 19ಕ್ಕೆ ಚಂದನವನದ ಬಹುನಿರೀಕ್ಷಿತ ಪೊಗರು ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು ನಟ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಇನ್‍ಸ್ಟಾಗ್ರಾಂನಲ್ಲಿ ಲೈವ್ ಬಂದ ಅದ್ಧೂರಿ ಹುಡುಗ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಪೊಗರು ಚಿತ್ರದ ಬಗೆಗಿನ ಮಹತ್ವದ ವಿಷಯಗಳನ್ನು ಹಂಚಿಕೊಂಡರು. ಕಥೆ ಸಾಕಷ್ಟು ಶೇಡ್, ಸರ್ಪ್ರೈ ಸ್ ಹೊಂದಿದ್ದರಿಂದ ಬರೋಬ್ಬರಿ ಮೂರುವರೆ ವರ್ಷ ಸಿನಿಮಾ ಮಾಡಲಾಗಿದೆ. ಇದೊಂದು ಕೇವಲ ಮಾಸ್ ಸಿನಿಮಾ ಅಲ್ಲ. ಚಿತ್ರದಲ್ಲಿ ಅಣ್ಣ-ತಂಗಿ, ಅಜ್ಜಿ-ಮೊಮ್ಮಗ, ತಂದೆ-ಮಗನ ಸೆಂಟಿಮೆಂಟ್ ಎಮೋಷನ್ ಎಲ್ಲವೂ ಇದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್ ಗಳಿದ್ದು, ಈಗಾಗಲೇ ಚಿತ್ರದ ಹಾಡುಗಳು ಯಶಸ್ವಿಯಾಗಿವೆ ಎಂದರು.
Advertisement
Advertisement
ತುಂಬಾ ಶ್ರಮ ಮತ್ತು ಸಮಯ ತೆಗೆದುಕೊಂಡು ಸಿನಿಮಾ ಮಾಡಿದ್ದೇವೆ. ಕೊರೊನಾ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಮತ್ತು ನಿರ್ದೇಶಕ ನಿರ್ಧರಿಸಿದ್ದಾರೆ. ಕೊರೊನಾ ಲಸಿಕೆ ಸಹ ಬಂದಿದ್ದು, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಧ್ರುವ ಮನವಿ ಮಾಡಿಕೊಂಡರು.
Advertisement
View this post on Instagram
Advertisement
ಮೂರು ಸಿನಿಮಾಗಳ ಹ್ಯಾಟ್ರಿಕ್ ಗೆಲುವಿನಲ್ಲಿರುವ ಧ್ರುವ ಅಭಿನಯದ ನಾಲ್ಕನೇ ಸಿನಿಮಾ ಇದಾಗಿದೆ. ಪೊಗರು ಸಿನಿಮಾದ ಹಾಡುಗಳು ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದ್ದು, ಕೊರೊನಾದಿಂದ ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆಗಿತ್ತು. ಪೊಗರು ಸಿನಿಮಾದಲ್ಲಿ ದೃವ ಸರ್ಜಾಗೆ ನಾಯಕಿಯಾಗಿ ಚಷ್ಮಾ ಸುಂದರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.