-ಸಿಆರ್ ಪಿಎಫ್ ನಲ್ಲಿದ್ದ ಪತಿ
ಚೆನ್ನೈ: ಪತಿ ಊರಿಗೆ ಬರದಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರನಲ್ಲಿ ನಡೆದಿದೆ. ಮಹಿಳೆಯ ಸಿಆರ್ ಪಿಎಫ್ ನಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದು, ರಜೆ ಸಿಗದ ಹಿನ್ನೆಲೆ ಊರಿಗೆ ಆಗಮಿಸಿರಲಿಲ್ಲ.
ಸಂಗೀತಾ (34) ಆತ್ಮಹತ್ಯೆಗೆ ಶರಣಾದ ಮಹಿಳೆ. ಸಿಆರ್‍ಪಿಎಫ್ ಕಾನ್‍ಸ್ಟೇಬಲ್ ರಾಜೇಶ್ ಕುಮಾರ್ 2017ರಲ್ಲಿ ಚೆನ್ನೈನಲ್ಲಿದ್ದಾಗ ಸಂಗೀತಾರ ಪರಿಚಯವಾಗಿತ್ತು. ಅದೇ ವರ್ಷ ಆಗಸ್ಟ್ ನಲ್ಲಿ ಇಬ್ಬರು ಮದುವೆಯಾಗಿ ಸುಲುರು ಪಟ್ಟಣದ ಮುಥುಗೌಂಡೆನ್ಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳ ಬಳಿಕ ನಾಗಾಲ್ಯಾಂಡ್ ಗೆ ರಾಜೇಶ್ ಅವರ ವರ್ಗಾವಣೆಯಾಗಿತ್ತು. ಪತ್ನಿಯನ್ನ ಮುಥುಗೌಂಡೆನ್ಪುರದಲ್ಲಿ ಬಿಟ್ಟ ರಾಜೇಶ್ ನಾಗಾಲ್ಯಾಂಡ್ ಗೆ ತೆರಳಿದ್ದರು.
Advertisement
Advertisement
ರಾಜೇಶ್ ಜನವರಿಯಲ್ಲಿ 20 ದಿನ ಪಡೆದು ಪತ್ನಿ ಬಳಿ ಬಂದಿದ್ದರು. ಜನವರಿ ರಜೆ ಬಳಿಕ ಹಿಂದಿರುಗಿದ್ದ ರಾಜೇಶ್ ವಾಪಸ್ ಬಂದಿರಲಿಲ್ಲ. ಪ್ರತಿದಿನ ವಿಡಿಯೋ ಕಾಲ್, ಫೋನ್ ನಲ್ಲಿ ಇಬ್ಬರು ಸಂಪರ್ಕದಲ್ಲಿದ್ದರು. ಲಾಕ್‍ಡೌನ್ ಆರಂಭವಾದಗಿನಿಂದ ರಜೆ ಪಡೆದು ಊರಿಗೆ ಬಂದು ಹೋಗುವಂತೆ ಹಲವು ಬಾರಿ ಸಂಗೀತಾ ಪತಿಗೆ ಹೇಳಿದ್ದರು. ರಜೆ ಸಿಗದ ಹಿನ್ನೆಲೆ ರಾಜೇಶ್ ತಮಿಳುನಾಡಿಗೆ ಬಂದಿರಲಿಲ್ಲ.
Advertisement
ಮನೆಯಲ್ಲಿ ಒಂಟಿಯಾಗಿದ್ದ ಸಂಗೀತ ಮಾನಸಿಕ ಖಿನ್ನತೆಗೊಳಗಾಗಿ ಮನೆಯಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕೆಲ ದಿನಗಳ ಮುಂಚೆ ಸಂಗೀತಾ ಪತಿಗೆ ಊರಿಗೆ ಬರುವಂತೆ ಹೇಳಿಕೊಂಡಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.