ಬೆಳಗ್ಗೆ ಎದ್ದ ಕೂಡಲೇ ಕೆಲವರಿಗೆ ಟೀ, ಕಾಫಿಯಿಂದಲೇ ದಿನ ಆರಂಭವಾಗುತ್ತದೆ. ಟೀ, ಕಾಫಿ ಆಡಿಕ್ಟ್ ಆಗಿರುವ ಎಷ್ಟೋ ಜನ ಅದನ್ನು ಕುಡಿಯಲಿಲ್ಲ ಅಂದರೆ ತಲೆ ಓಡುವುದೇ ಇಲ್ಲ ಅಂತಾರೆ. ಅಂತಹದರಲ್ಲಿ ಕಳೆದ 2 ದಿನಗಳಿಂದ ಟೀ, ಕಾಫಿ ಕುಡಿಯಲು ಆಗದೇ ದೊಡ್ಮನೆ ಸದಸ್ಯರು ಒದ್ದಾಡುತ್ತಿದ್ದಾರೆ.
ಟಾಸ್ಕ್ ಮುಗಿದ ಬಳಿಕ ರಘು ಪ್ರಾಪರ್ಟಿಯನ್ನು ಮುಟ್ಟಿದ್ದರಿಂದ ಬಿಗ್ಬಾಸ್ ಮನೆಯ ಸದಸ್ಯರಿಂದ ಕಾಫಿ ಟೀಯನ್ನು ವಶಪಡಿಸಿಕೊಂಡಿದ್ದು, ತಮ್ಮ ಮುಂದಿನ ಆದೇಶದವರೆಗೂ ಮನೆ ಮಂದಿ ಕಾಫಿ, ಟೀ ಕುಡಿಯುವಂತಿಲ್ಲ ಎಂದು ಸೂಚಿಸಿದ್ದಾರೆ. ಅದರಂತೆ ಕಾಫಿ, ಟೀ ಇಲ್ಲದೆ ಸದ್ಯ ಕಂಗೆಟ್ಟಿರುವ ಮನೆ ಮಂದಿ ಇದೀಗ ಅದಕ್ಕಾಗಿ ಹಂಬಲಿಸುತ್ತಿದ್ದಾರೆ. ಈ ಮಧ್ಯೆ ಶುಭಾ ಪೂಂಜಾ ಬಿಗ್ಬಾಸ್ಗೆ ಟೀ ಕಳುಹಿಸಿಕೊಡಿ ಬಿಗ್ಬಾಸ್ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.
ನಿನ್ನೆ ಬೆಳಗ್ಗೆ ಎದ್ದ ಕೂಡಲೇ ಶುಭಾ, ಬಿಗ್ಬಾಸ್ ಕಾಫಿ ಟೀ ಕಳುಹಿಸಿ ಕೊಡಿ, ರಘುಗೆ ಏನಾದರೂ ಪನಿಶ್ಮೆಂಟ್ ಕೊಡಿ. ಬಿಸಿಲಲ್ಲಿ ನಿಲ್ಲಿಸಿ ಸ್ವಿಮಿಂಗ್ ಪೂಲ್ ಒಳಗೆ ತಳ್ಳಿ, ಕಾಂಪೌಂಡ್ ಮೇಲೆ ಒಣಗಾಕಿ, 500 ಬಸಕಿ ಹೊಡಿಸಿ, ಏನ್ ಬೇಕಾದರೂ ಮಾಡಿ ನಮಗೆ ಟೀ ಕೊಡಿ ಬಿಗ್ಬಾಸ್.. ನಾನು ಬೆಳಗ್ಗೆ ಎದ್ದು ಕುಡಿಯುವುದು ಒಂದೇ ಒಂದು ಟೀ, ನನಗೆ ತುಂಬಾ ಟೀ ಬೇಕು.
ನಿಮಗೆ ಬೇಕಾದರೆ, ನಾನೇ ಅವನನ್ನು ಸ್ವಿಮಿಂಗ್ ಪೂಲ್ ಒಳಗೆ ತಳ್ಳುತ್ತೇನೆ. ಅವನಿಗೆ 100 ಬಸಕಿ ಹೊಡಿಸಲಾ, ಅವನನ್ನು ತಳ್ಳಲಾ, ಅವನನ್ನು ಹೊಡಿಲಾ, ಇವನಿಗೆ ಏನ್ ಬೇಕಾದರೂ ಮಾಡಿ ಇಲ್ಲೆ ಇದ್ದಾನೆ. ಬೇಕಾದರೆ ಅವನನ್ನು ಕಿಚನ್ ಸಿಂಕ್ನಲ್ಲಿ ಹಾಕಿ ಬಿಡುತ್ತೇನೆ ಎನ್ನುತ್ತಾರೆ. ಆಗ ರಘು ನಾನೇನಾದರೂ ಏಲಿಮಿನೆಂಟ್ ಆದರೆ ಅಪ್ಪಿತಪ್ಪಿ ಇವರೇನಾದರೂ ಅತ್ತರೆ ಸೆಕ್ಯೂರಿಟಿ ಗಾರ್ಡ್ನನ್ನು ಕರೆಸಿ ಹೊಡಿಸಿ. 10 ವಾರಗಳ ಬಾಂಧವ್ಯ ನಂಟು ಅಂದುಬಿಟ್ಟು, ಒಂದು ಕಾಫಿ, ಟೀಗೆ ಹೇಗೆಲ್ಲಾ ನನ್ನ ಮಾನ ಹಾರಾಜಿಗೆ ಹಾಕುತ್ತಿದ್ದಾರೆ ಎಂದು ನಗುತ್ತಾ ಹೇಳುತ್ತಾರೆ.
ಬಳಿಕ ಶುಭಾ ಬಿಗ್ಬಾಸ್ ಅವನ ಕೂದಲನ್ನು ಬೋಳಿಸಬೇಕಾ ಹೇಳಿ ಪ್ಲೀಸ್ ಏನು ಮಾಡಬೇಕು. ಅವನನ್ನು ನಾನು ಏನು ಮಾಡುವುದಕ್ಕೆ ಬೇಕಾದರೂ ರೆಡಿ, ಅವನು ಮಾಡಿದಕ್ಕೆ ನಾನು ಯಾಕೆ ಟೀ ಕುಡಿಯದೇ ಇರಬೇಕು. ಅವನನ್ನು ಹೇಗಿದ್ದರೂ ಇಂದು ಕಳಪೆಗೆ ಹಾಕುತ್ತಿದ್ದೇವೆ. ಬಿಗ್ಬಾಸ್ ಏನಾದರೂ ಮಾಡಿ ಪ್ಲೀಸ್.. ಎಂದು ಮನವಿ ಮಾಡಿಕೊಂಡಿದ್ದಾರೆ.