ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ 10 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ನಿರ್ದೇಶಕ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 10 ವರ್ಷ. ಮಗಾ, ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ರಕ್ಷಿತ್ ಶೆಟ್ಟಿ ಫೋಟೋವನ್ನು ಕಾಮನ್ ಡಿಪಿಯಾಗಿ ಬಳಸಿದ್ದಾರೆ.
Advertisement
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 10 ವರ್ಷ..!❤️❤️❤️
ಮಗಾ, ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು.. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುತ್ತೇನೆ.. pic.twitter.com/X5jo39Sh9h
— Rishab Shetty (@shetty_rishab) July 22, 2020
Advertisement
ಇನ್ನು ನಟಿ ಶೀತಲ್ ಶೆಟ್ಟಿ ವಿಶ್ ಮಾಡಿದ್ದು, ಅಭಿನಂದನೆಗಳು ರಕ್ಷಿತ್ ಶೆಟ್ಟಿ, ಇನ್ನಷ್ಟು ಅದ್ಭುತ ಅನುಭಗಳೊಂದಿಗೆ ನಿನ್ನ ಭವಿಷ್ಯ ಹೀಗೆಯೇ ಮುಂದುವರಿಯಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಶ್ ಮಾಡಿದ ಎಲ್ಲರಿಗೂ ರಕ್ಷಿತ್ ಶೆಟ್ಟಿ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
Congratulations @rakshitshetty
I wish you extraordinary journey in future wid varied amazing experiences…#10yearsofRakshitshetty pic.twitter.com/y0w2KBWoSS
— sheethal shetty (@isheethalshetty) July 22, 2020
Advertisement
ಕನ್ನಡ ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ .ಬಿ ಶೆಟ್ಟಿ ಕೂಡ ರಕ್ಷಿತ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಅವರು, ರಕ್ಷಿತ್ ಶೆಟ್ಟಿ ಎಂಬ ಕನಸಿಗೆ ಹತ್ತು ವರ್ಷಗಳು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸನ್ನಷ್ಟೇ ಹೊತ್ತುಕೊಂಡು ಬೆಂಗಳೂರು ಸೇರಿದ ರಕ್ಷಿತ್ ಇಂದು ತನ್ನ ಕನಸನ್ನು ನನಸಾಗಿದ್ದಷ್ಟೇ ಅಲ್ಲ ಸಣ್ಣ ಊರಿನ ಭವಿಷ್ಯದ ಸಿನಿಮಾ ಕರ್ತೃಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹಿಟ್ ಸಿನಿಮಾಗಳು ಅನೇಕವಿದ್ದರೂ ನಾನು ಅವರ ಅಭಿಮಾನಿಯಾಗಿದ್ದು ಉಳಿದವರು ಕಂಡಂತೆಗೆ. ಕಾರಣ ನನ್ನೂರಿನ ಭಾಷೆ ಜನ ಮತ್ತು ಸಂಸ್ಕೃತಿಯನ್ನು ಆ ಸಿನಿಮಾದಲ್ಲಿ ಅವರು ಬಿಂಬಿಸಿದ ರೀತಿ. ಉಳಿದವರು ಕಂಡಂತೆ ಇಲ್ಲದಿದ್ದಲ್ಲಿ ಒಂದು ಮೊಟ್ಟೆಯ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿಯೇ ಆಗುತ್ತಿತ್ತು ಎನ್ನುವುದು ಸಂಶಯ. ಅಷ್ಟರ ಮಟ್ಟಿಗೆ ನಮ್ಮಲ್ಲಿ ನಂಬಿಕೆ ತಂದದ್ದು ರಕ್ಷಿತ್ ಮತ್ತವರ ಸಿನಿಮಾ. ರಕ್ಷಿತ್ ಇನ್ನಷ್ಟು ಬೆಳೆಯಲಿ ಎಂಬ ಆಶಯದೊಂದಿಗೆ ಅವರಿಗೆ ಒಳ್ಳೆಯಾದಾಗಲಿ ಎಂದು ಬರೆದುಕೊಂಡಿದ್ದಾರೆ.
ರಕ್ಷಿತ್ ಸಿನಿಜರ್ನಿ:
ಕರಾವಳಿಯ ಅಪ್ಪಟ ಪ್ರತಿಭೆಯಾಗಿರುವ ರಕ್ಷಿತ್ ಶೆಟ್ಟಿ, ಎರಡು ವರ್ಷ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಸಿನಿಮಾ ರಂಗ ಪ್ರವೇಶಿಸಿದ ಅವರು, ಆರಂಭದಲ್ಲಿ ತಾವು ನಟಿಸಿದ ಎರಡು ಸಿನಿಮಾಗಳು ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಆದರೆ ಛಲಬಿಡದ ರಕ್ಷಿತ್ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಸಿನಿಮಾದಲ್ಲಿ ನಟನೆ ಮಾಡಿ ಸೈ ಅನಿಸಿಕೊಂಡಿದ್ದಲ್ಲದೇ ಎಲ್ಲರ ಹಾಟ್ ಫೇವರೇಟ್ ಆಗಿ ಮಿಂಚಿದ್ದರು. ಆ ಬಳಿಕದ ‘ಉಳಿದವರು ಕಂಡಂತೆ’ ಒಂದು ಲೆವೆಲ್‍ನಲ್ಲಿ ರಕ್ಷಿತ್‍ಗೆ ಹೆಸರು ತಂದುಕೊಟ್ಟಿದ್ದು, ನಂತರ ನಟಿಸಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಕೂಡ ಸೆಟ್ಟೇರಿತು.
ಇದಾದ ಬಳಿಕ ಅಮದರೆ 2016ರಲ್ಲಿ ‘ಕಿರಿಕ್ ಪಾರ್ಟಿ’ ಸನಿಮಾ ತೆರೆಕಂಡಿದೆ. ಆನಂತರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಿಲೀಸ್ ಆಗಿದ್ದು, ಜನರ ಮನಸ್ಸಲ್ಲಿ ಸಿಂಪಲ್ ಸ್ಟಾರ್ ಉಳಿದುಕೊಂಡರು. ಕೇವಲ ನಟರಾಗದೆ ನಿರ್ದೇಶಕರೂ ಆಗಿರುವ ರಕ್ಷಿತ್, ಸದ್ಯ ‘ಪುಣ್ಯಕೋಟಿ’, ‘ಸಪ್ತಸಾಗರದಾಚೆ ಎಲ್ಲೋ’, ‘777 ಚಾರ್ಲಿ’ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ.