– ಬಾಡಿಗೆ ಮನೆ ಪಡೆದು ದೈಹಿಕ ಸಂಪರ್ಕ
ಉಡುಪಿ: ವಿದ್ಯಾರ್ಥಿನಿ ರಕ್ಷಿತಾ ನಾಯಕ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರಶಾಂತ್ ಮೊಗವೀರನ ಬಂಧನವಾಗಿದೆ. ಉಡುಪಿ ಪೊಲೀಸರು ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
Advertisement
ಕಳೆದ ಒಂದು ವಾರದಿಂದ ರಕ್ಷಿತಾ ನಾಯಕ್ ಗೆಳೆಯ ಪ್ರಶಾಂತ್ ಮೊಗವೀರನನ್ನು ಉಡುಪಿ ನಗರ ಠಾಣಾ ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
Advertisement
Advertisement
ಅಕ್ಟೋಬರ್ 24ರಂದು ರಕ್ಷಿತಾಳನ್ನು ಪ್ರಶಾಂತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ತಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದ. ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಪರಾರಿಯಾಗಿ ಫೋನ್ ಸ್ವಿಚ್ ಆಫ್ ಮಾಡಿದ್ದ. ಹುಡುಕಾಟ ನಡೆಸಿದ ಪೊಲೀಸರು ಕಳೆದ ಒಂದು ವಾರದಿಂದ ವಿಚಾರಣೆ ನಡೆಸಿ ಕಳುಹಿಸಿ ಕೊಡುತ್ತಿದ್ದರು. ಇದೀಗ ಪ್ರಕ್ರಿಯೆ ನಡೆಸಿ ಕೋರ್ಟಿಗೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಪ್ರಶಾಂತ್ ಮೊದಲೇ ಮದುವೆಯಾಗಿರುವುದನ್ನು ರಕ್ಷಿತಾಳಿಂದ ಮುಚ್ಚಿಟ್ಟಿದ್ದ. ಉಡುಪಿಯ ಅಂಬಾಗಿಲು ಬಳಿ ಬಾಡಿಗೆ ಮನೆ ಪಡೆದು ಆಕೆಗೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಮದ್ಯಪಾನ ಸಿಗರೇಟು ಸೇವನೆಯ ಚಟಗಳನ್ನು ಕಲಿಸಿದ್ದನು.
Advertisement
ಗೆಳೆಯರನ್ನು ಬಾಡಿಗೆ ಮನೆಗೆ ಕರೆಸಿ ಕಿರುಕುಳ ನೀಡುತ್ತಿದ್ದ. ರಕ್ಷಿತಾಳನ್ನು ಗರ್ಭವತಿ ಮಾಡಿ, ಅಬಾರ್ಷನ್ ಮಾಡಿಸಿದ್ದ ಎಂದು ದೂರಲಾಗಿದೆ. ಪ್ರಶಾಂತ್ ಮೊಗವೀರ ಉಡುಪಿ ನಗರ ಠಾಣಾ ಪೊಲೀಸ್ ಕಸ್ಟಡಿಯಲ್ಲಿದ್ದು ಪೊಲೀಸರು ತೀವ್ರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಉಡುಪಿ ಎಸ್ ಪಿ ವಿಷ್ಣುವರ್ಧನ್, ಆರಂಭದಿಂದಲೂ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಳೆದ ಒಂದು ವಾರದಿಂದ ಹಲವು ಸಾಕ್ಷಾಧಾರಗಳನ್ನು ಸಂಗ್ರಹ ಮಾಡಿದ್ದೇವೆ. ಆರೋಪಿಯನ್ನ ಈ ಹಿಂದೆಯೇ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದೆವು. ಇದೀಗ 3 ದಿನ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.