ಬೇಸಿಗೆಯ ಬಿಸಿಲು ಒಂದೆಡೆಯಾದರೆ ರಂಜಾನ್ ಹಬ್ಬದ ಸಂಭ್ರಮ ಒಂದುಕಡೆ. ಹೀಗಿರುವಾಗ ರಂಜಾನ್‍ಗೆ ಮುಸ್ಲಿಂ ಬಾಂಧವರು ಉಪವಾಸವನ್ನು ಮಾಡುತ್ತಾರೆ. ಪ್ರತಿದಿನ ಉಪವಾಸದ ವ್ರತ ಮುಗಿದ ಬಳಿಕ ತಮ್ಮಿಷ್ಟದ ಆಹಾರವನ್ನು ಸೇವಿಸುತ್ತಾರೆ. ಹೊರಗೆ ಹೋಗಿ ಏನಾದ್ರೂ ಆಹಾರ ಸೇವಿಸೋಣ ಅಂದ್ರೆ ಕೊರೊನಾ ಭಯ. ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಸಪೋಟ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದಾಗಿದೆ. ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕ್ಕು ಹಣ್ಣು- 3 ರಿಂದ4
* ಕುದಿಸಿ ಆರಿಸದ ಹಾಲು- 1 ಕಪ್
* ಸಕ್ಕರೆ- ಅರ್ಧ ಕಪ್
Advertisement
ಮಾಡುವ ವಿಧಾನ
* ಮೊದಲು ಚಿಕ್ಕು ಹಣ್ಣುಗಳನ್ನು ಚೆನ್ನಾಗಿ ತೊಳದುಕೊಂಡು ಬಿಡಿಸಿ ಬೀಜ ತೆಗೆದಿಟ್ಟುಕೊಳ್ಳಬೇಕು.
* ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೀಜಗಳನ್ನು ತೆಗೆದಿಟ್ಟ ಚಿಕ್ಕುಹಣ್ಣು ಹಾಗೂ ಜೊತೆಯಲ್ಲಿ ಹಾಲು ಹಾಕಬೇಕು.
*ಈ ಮಿಕ್ಸಿ ಜಾರಿಗೆ ನಮಗೆ ಎಷ್ಟು ಸಿಹಿ ಬೇಕು ಎಂಬುದನ್ನು ನೋಡಿಕೊಂಡು ಸಕ್ಕರೆಯನ್ನು ಸೇರಿಸಬೇಕು.ಇದನ್ನು ರುಬ್ಬಿಕೊಳ್ಳಬೇಕು.
Advertisement
Advertisement
* ರುಬ್ಬಿ ತೆಗೆದ ಚಿಕ್ಕುವನ್ನು ಸೊಸಿ ಜ್ಯೂಸ್ ತೆಗೆಯಬೇಕು.
* ನಂತರ ಈ ಜ್ಯೂಸ್ ಅನ್ನು ಒಂದು ಗ್ಲಾಸ್‍ಗೆ ಹಾಕಬೇಕು. ಜ್ಯೂಸ್ ತುಂಬಾ ಗಟ್ಟಿಯಾಗಿರುತ್ತದೆ. ಬೇಕಾದಲ್ಲಿ ಹಾಲು, ಒಣ ದ್ರಾಕ್ಷಿ, ಗೊಡಂಬಿಯನ್ನು ಸೇರಿಸಿಕೊಳ್ಳಬಹುದಾಗಿದೆ.
ನಾವು ಅಂಗಡಿಗಳಿಗೆ ಹೋಗಿ ಸಪೋಟ ಮಿಲ್ಕ್ ಶೇಕ್ ಕುಡಿಯುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮತ್ತು ಸರಳವಾಗಿ ಜ್ಯೂಸ್ ಮಾಡಿಕೊಂಡು ಸವಿಯಬಹುದಾಗಿದೆ.