ರಂಗಭೂಮಿ ಕಲಾವಿದ ರಾಜಾರಾಂ ನಿಧನ

Public TV
1 Min Read
rajaram

ಬೆಂಗಳೂರು: ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ ಅವರು ಕೊರೊನಾಗೆ ಬಲಿಯಾಗಿದ್ದಾರೆ.

ರಾಜಾರಾಂ (84) ಅವರು ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಿಂತ ಹೆಚ್ಚಾಗಿ ರಾಜಾರಾಂ ಅವರು ರಂಗಭೂಮಿಯಲ್ಲೇ ಸಕ್ರಿಯವಾಗಿದ್ದರು. ರಾಜಾರಾಂ ಅವರಿಗೆ ಕೊರೊನಾ ಸೋಂಕು ಧೃಡವಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕುಟುಂಬದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಟ ಇಂದು ಕೊನೆಯುಸಿರೆಳೆದಿದ್ದಾರೆ.

CORONA VIRUS 2

1971ರಿಂದ ಇಲ್ಲಿಯವರೆಗೆ 62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಿನಿರಂಗದಲ್ಲಿ ರಾಜ್‍ಕುಮಾರ್ ಸೇರಿದಂತೆ ಬಹುತೇಕ ಎಲ್ಲ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ರಾಜಾರಾಂ. ಶಾಲಾ ದಿನಗಳಿಂದಲೇ ರಂಗಭೂಮಿಯಲ್ಲಿ ಆಸಕ್ತಿ ತೋರಿದ ರಾಜಾರಾಂ ನಂತರದಲ್ಲಿ ಸಿನಿಮಾಗಳಿಗೆ ಬಂದು ಹೆಸರು ಸಹ ಮಾಡಿದರು. ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದ ಹಿರಿಯ ಕಲಾವಿದರಾಗಿದ್ದ ಇವರ ಅಗಲಿಕೆಯ ಬಗ್ಗೆ ನಟ ಸೃಜನ್ ಲೋಕೇಶ್ ಸೇರಿದಂತೆ ಅನೇಕ ಸ್ಯಾಂಡಲ್‍ವುಡ್ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮೀಡಿದಿದ್ದಾರೆ.

 

View this post on Instagram

 

A post shared by Srujan Lokesh (@srujanlokesh)

1971ರಲ್ಲಿ ಕೃಷ್ಣಸ್ವಾಮಿ ನಿರ್ದೇಶಕ ಪಾಪಪುಣ್ಯ ಸಿನಿಮಾ ರಾಜಾರಾಂ ಅವರ ಅಭಿನಯದ ಮೊದಲ ಸಿನಿಮಾ. ಸರೋಜಾ ದೇವಿ, ಕಲ್ಯಾಣ್ ಕುಮಾರ್ ಅಶ್ವತ್ಥ್ ಪ್ರಮುಖ ಪಾತ್ರದಲ್ಲಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು ರಾಜಾರಾಂ. ನಟ ಲೋಕೇಶ್ ಅವರೊಂದಿಗೆ ಬಹಳ ಹಳೆಯ ಗೆಳೆತನವಿತ್ತು. ರಂಗಭೂಮಿಯಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದರು.

ಕೊರೊನಾ ಮಹಾಮಾರಿಗೆ ಕಲಾ ಸೇವೆ ಮಾಡುತ್ತಿರುವ ಹಲವಾರು ಮಂದಿ ಕಲಾವಿದರು ಕೊರೊನಾಗೆ ಬಲಿಯಾಗಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *