ಮುಂಬೈ: ಬಾಲಿವುಡ್ ಪ್ರತಿಭಾವಂತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಭಾರತೀಯ ಸೇನೆಯ ಯೋಧರಿಗೆ ಆಹಾರ ಬಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಶಾಂತ್ ಅವರ ಅಕಾಲಿಕ ನಿಧನದ ನಂತರ ಬಾಲಿವುಡ್ ನಟರಿಂದ ಹಿಡಿದು ಅಭಿಮಾನಿಗಳವರೆಗೆ ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಸುಶಾಂತ್ ಅವರ ಅಗಲಿಕೆ ಬಾಲಿವುಡ್‍ಗೆ ಭಾರೀ ನಷ್ಟವನ್ನು ಉಂಟು ಮಾಡಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಅವರ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸುಶಾಂತ್ ಭಾರತೀಯ ಸೇನೆಯ ಯೋಧರಿಗೆ ಆಹಾರ ಬಡಿಸುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಇದು ಸುಶಾಂತ್ ಸಿಂಗ್ ಅವರ ಸರಳತೆಯನ್ನು ತೋರುತ್ತದೆ. ಅವರು ಇಲ್ಲ ಎಂದು ನೆನೆದರೆ ಕಣ್ಣೀರು ಬರುತ್ತವೆ ಎಂದು ಹೇಳಿದ್ದಾರೆ.
https://www.instagram.com/p/CBtFrBDBXmM/?utm_source=ig_embed
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯ ವಿರುದ್ಧ ಬಿಹಾರ್ ನ್ಯಾಯಾಲಯದಲ್ಲಿ ಶನಿವಾರ ದೂರು ದಾಖಲಾಗಿದೆ. ಬಿಹಾರದ ಮುಜಫರ್ ಪುರದಲ್ಲಿನ ಪಟಾಹಿ ನಿವಾಸಿ ಕುಂದನ್ ಕುಮಾರ್ ದೂರು ನೀಡಿದ್ದಾರೆ. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಅವರ ಎದುರು ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣ ಜೂನ್ 24ರಂದು ವಿಚಾರಣೆಗೆ ಬರಲಿದೆ.