ಹುಬ್ಬಳ್ಳಿ: ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯ ವಿಚಾರಣೆ ಎರಡನೇ ದಿನವೂ ಮುಂದುವರಿದಿದೆ.
ಹುಬ್ಬಳ್ಳಿಯ ಸಿಎಆರ್ ಮೈದಾನದ ಕಚೇರಿಯಲ್ಲಿ ನಡೆಯುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ ಇಂದು ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಅವರ ಮಾವ ಚಂದ್ರಶೇಖರ್ ಇಂಡಿ ಹಾಗೂ ಮಾಜಿ ಆಪ್ತ ಕಾರ್ಯದರ್ಶಿ ಸೋಮಲಿಂಗ ನ್ಯಾಮೇಗೌಡ ವಿಚಾರಣೆ ಸಹ ಮುಂದುವರಿದಿದೆ.
Advertisement
Advertisement
ನ್ಯಾಯಾಂಗ ಬಂಧನದಲ್ಲಿದ್ದ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ತನ್ನ ವಶಕ್ಕೆ ಪಡೆದಿದೆ. ಈಗಾಗಲೇ ತಾವು ಸಂಗ್ರಹಿಸಿರುವ ಸಾಕ್ಷ್ಯಗಳ ಬಗ್ಗೆಯೂ ಹೇಳಿಕೆಯನ್ನ ಪಡೆಯುತ್ತಿದ್ದು, ವಿಚಾರಣೆಗೆ ಒಳಪಟ್ಟಿರುವ ನೂರಾರು ಜನರ ಹೇಳಿಕೆ ಹಾಗೂ ಸಾಕ್ಷ್ಯಗಳ ಬಗ್ಗೆ ವಿನಯ್ ಕುಲಕರ್ಣಿಯವರನ್ನ ವಿಚಾರಣೆ ನಡೆಸುತ್ತಿದ್ದಾರೆ.
Advertisement
Advertisement
ಸಿಆರ್ ಮೈದಾನದಲ್ಲಿ ಎರಡು ಪ್ರತ್ಯೇಕ ಕೊಠಡಿಗಳನ್ನ ಪಡೆದಿರುವ ಸಿಬಿಐ ತಂಡ, ಪೂರಕವಾದ ವ್ಯಕ್ತಿಗಳನ್ನ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಆಪ್ತ ಸಹಾಯಕರಾಗಿದ್ದ ಕೆಎಎಸ್ ಅಧಿಕಾರಿ ಸೋಮಲಿಂಗ ನ್ಯಾಮೇಗೌಡರನ್ನ ಸಹ ತ್ರೀವ ವಿಚಾರಣೆ ನಡೆಸಿತ್ತು. ಇಂದು ಬೆಳಗ್ಗೆ 9 ಗಂಟೆಯಿಂದ ಮತ್ತೆ ವಿಚಾರಣೆ ಆರಂಭಿಸಿರುವ ಸಿಬಿಐ, ಪ್ರಕರಣದಲ್ಲಿರುವ ಹಲವರನ್ನು ವಿಚಾರಣೆ ನಡೆಸಲಿದೆ.
ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿ ಅವಧಿ ನಾಳೆ ಬೆಳಗ್ಗೆವರೆಗೆ ಇದ್ದು, ನಾಳೆ ಬೆಳಗ್ಗೆ 11ಗಂಟೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸಿಬಿಐ ಅಧಿಕಾರಿಗಳು ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ.