ಸೈಂಟ್ ಲೂಸಿಯಾ: ವೆಸ್ಟ್ ಇಂಡಿಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಕ್ರಿಸ್ ಗೇಲ್ ತಮ್ಮ ಯೂನಿವರ್ಸಲ್ ಬಾಸ್ ಎಂಬ ಖ್ಯಾತನಾಮವನ್ನು ಬದಲಾಯಿಸಿ ನಾನು ಬರಿ ‘ದಿ ಬಾಸ್’ ಎಂದು ಹೇಳಿಕೊಂಡಿದ್ದಾರೆ.
Advertisement
ಕೆಲದಿನಗಳ ಹಿಂದೆ ಟಿ20 ಕ್ರಿಕೆಟ್‍ನಲ್ಲಿ 14 ಸಾವಿರ ರನ್‍ಗಳ ಗಡಿಯನ್ನು ದಾಟಿದ ಗೇಲ್ ನೂತನ ವಿಶ್ವದಾಖಲೆ ಬರೆದು ಮಿಂಚಿದ್ದರು. ಆ ಬಳಿಕ ಮಾತನಾಡಿದ ಗೇಲ್ ನಾನು ಟಿ20 ಕ್ರಿಕೆಟ್‍ನಲ್ಲಿ ಯಾವತ್ತು ಬಾಸ್ ಆಗಿರಲು ಇಷ್ಟಪಡುತ್ತೇನೆ ಎಂದಿದ್ದಾರೆ. ತಮ್ಮ ಬ್ಯಾಟ್ ಮೇಲೆ ಇದ್ದ ಯೂನಿವರ್ಸಲ್ ಬಾಸ್ ಎಂಬ ಬರಹವನ್ನು ತೆಗೆಯಬೇಕೆಂದು ಈ ಹಿಂದೆ ಐಸಿಸಿ ಗೇಲ್‍ಗೆ ಸೂಚಿಸಿತ್ತು. ಹಾಗಾಗಿ ಇದೀಗ ಗೇಲ್ ಯೂನಿವರ್ಸಲ್ ಬಾಸ್ ಬದಲಾಗಿ ತಮ್ಮ ಬ್ಯಾಟ್‍ನಲ್ಲಿ ‘ದಿ ಬಾಸ್’ ಎಂದು ಮಾತ್ರ ಬರೆದುಕೊಂಡಿದ್ದಾರೆ.
Advertisement
Advertisement
ತಮ್ಮ ಬ್ಯಾಟ್‍ನಲ್ಲಿ ‘ದಿ ಬಾಸ್’ ಎಂದು ಬರೆದುಕೊಂಡಿರುವ ಬಗ್ಗೆ ವಿವರಿಸಿದ ಗೇಲ್ ನನ್ನ ಬ್ಯಾಟ್‍ನಲ್ಲಿ ಯೂನಿವರ್ಸಲ್ ಬಾಸ್ ಎಂಬ ಬರಹದ ಬಗ್ಗೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗಾಗಿ ನಾನು ‘ದಿ ಬಾಸ್’ ಎಂದು ಮರು ನಾಮಕರಣ ಮಾಡಿಕೊಂಡಿದ್ದೇನೆ. ಐಸಿಸಿ ನನ್ನನ್ನು ಯೂನಿವರ್ಸಲ್ ಬಾಸ್ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದರೆ ನಾನು ಮಾತ್ರ ಯಾವತ್ತು ‘ದಿ ಬಾಸ್’ ಅಗಿರಲು ಇಷ್ಟಪಡುತ್ತೇನೆ ಎನ್ನುವ ಮೂಲಕ ಕ್ರಿಕೆಟ್ ದೈತ್ಯ ಐಸಿಸಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ
Advertisement
Chris Gayle's got some fresh stickers after a short conversation with the ICC! ???? #WIvAUS pic.twitter.com/99nxhrBrGP
— cricket.com.au (@cricketcomau) July 13, 2021
ಗೇಲ್ ಒಟ್ಟು 431 ಟಿ20 ಪಂದ್ಯಗಳಿಂದ 1083 ಬೌಂಡರಿ, 1028 ಸಿಕ್ಸರ್ ಸಹಿತ 14,038 ರನ್ ಚಚ್ಚಿದ್ದಾರೆ. 37.63 ಸರಾಸರಿ, 146.18 ಸ್ಟ್ರೈಕ್ ರೇಟ್ ನೊಂದಿಗೆ 22 ಶತಕ, 87 ಅರ್ಧಶತಕ ಈಗಾಗಲೇ ಹೊಡೆದಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಹೊಡಿಬಡಿ ಆಟದ ಮೂಲಕ ಘಟಾಟುಘಟಿ ಬೌಲರ್ ಗಳ ಬೆವರಿಳಿಸುವ ಗೇಲ್‍ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ ಅವರೆಲ್ಲರೂ ಕೂಡ ಯೂನಿವರ್ಸಲ್ ಬಾಸ್ ಎಂದು ಗೇಲ್‍ರನ್ನು ಒಪ್ಪಿಕೊಂಡಿದ್ದರು. ಅವರೆಲ್ಲರಿಗೂ ಇನ್ನು ಮುಂದೆ ಯುನಿವರ್ಸಲ್ ಬಾಸ್ ಬದಲಾಗಿ ಗೇಲ್ ‘ದಿ ಬಾಸ್’ ಆಗಿ ಕಾಣಿಸಿಕೊಳ್ಳಲಿದ್ದಾರೆ.