ಚಾಮರಾಜನಗರ: ಆಸ್ತಿಯಿದೆ ಆದ್ರೆ ಸಾಲ ತೀರುತ್ತಿಲ್ಲ, ಉದ್ಯೋಗವಿದೆ ಆದರೆ ಅಲ್ಪ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗ್ತಿದೆ. ಈ ವೇಳೆ ಆ ಕುಟುಂಬದ ಪರ ನಿಂತಿದ್ದು ಒಬ್ಬ ಮಹಿಳೆ. ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಆ ಮಹಿಳೆಯ ದಿಟ್ಟ ಹೆಜ್ಜೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಪುಸ್ತಕ ಓದಿ, ಯೂಟ್ಯೂಬ್ ನೋಡಿ ಕೃಷಿಯಲ್ಲಿ ಯಶಕಂಡ ಮಹಿಳೆಯ ಯಶೋಗಾಥೆ ಇಲ್ಲಿದೆ.
Advertisement
ಹೌದು. ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಆ ಕುಟುಂಬಕ್ಕೆ 5 ಎಕರೆ ಜಮೀನಿತ್ತು. ಆದರು ಕೂಡ ಸಾಲದ ಸುಳಿಯಲ್ಲಿ ಸಿಲುಕಿದ್ದ ಹಿನ್ನೆಲೆ ಕೃಷಿ ಮಾಡಲೂ ಹಿಂದೇಟು ಹಾಕಿದ್ದರು.ಪ್ರಭಾಮಣಿ ಎಂಬ ಮಹಿಳೆ ಖಾಸಗಿ ಸಂಸ್ಥೆಯಲ್ಲಿ 6 ಸಾವಿರ ರೂಪಾಯಿಗೆ ಕೆಲಸ ಮಾಡ್ತಿದ್ದರು.ಆದರೂ ಕೂಡ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಈ ವೇಳೆ ಪ್ರಭಾಮಣಿ ಸಹೋದರ ಅಕ್ಕನ ಬಳಿ ಬಂದು ನಿಮಗೆ 5 ಎಕರೆ ಜಮೀನಿದೆ ಯಾಕೆ ಆಧುನಿಕ ಕೃಷಿ ಮಾಡಬಾರದು ಅಂತ ಕೃಷಿ ಸಂಬಂಧಿತ ಪುಸ್ತಕ ನೀಡಿದ್ರು. ನಂತರ ಆ ಪುಸ್ತಕ ಪ್ರಭಾಮಣಿ ಕುಟುಂಬವನ್ನು ಸಾಲದ ಸುಳಿಯಿಂದ ಹೊರ ತಂದಿದೆ.
Advertisement
Advertisement
ವಿವಿಧ ಕೃಷಿ ಸಂಬಂಧಿತ ಪುಸ್ತಕ ಓದಿ, ಯೂಟ್ಯೂಬ್ ನೋಡಿ ಬಹು ಬೆಳೆ ಪದ್ಧತಿ ಅನುಸರಿಸಿ ಕೃಷಿ ಮಾಡಲಾರಂಭಿಸಿದ ಪ್ರಭಾಮಣಿ ಮತ್ತೆ ಹಿಂದಿರುಗಿ ನೋಡಿಲ್ಲ. ಪುಸ್ತಕ ಓದಿದ್ರೆ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾರೆ. ಆದರೆ ಈ ಪುಸ್ತಕ ಪ್ರಭಾಮಣಿ ಲೈಫ್ ಅನ್ನೇ ಬದಲಾಯಿಸಿದೆ. ಇದೀಗ ಪ್ರಭಾಮಣಿ ಕೃಷಿ ಮಾಡಿ ದಿನಕ್ಕೆ ಒಂದೂವರೆ ಸಾವಿರ ಸಂಪಾದಿಸ್ತಿದ್ದಾರೆ. ಕುಟುಂಬವನ್ನು ಸಾಲದ ಸುಳಿಯಿಂದ ಹೊರತಂದು ಲಕ್ಷಾಂತರ ರೂ. ಹಣ ಗಳಿಸ್ತಿದ್ದಾರೆ.
Advertisement
ಪ್ರಭಾಮಣಿ ಕುಟುಂಬ ಜಮೀನಿನಲ್ಲಿ ಕ್ಯಾರೇಟ್, ಬೀನ್ಸ್, ಈರುಳ್ಳಿ, ಬದನೆ, ಆಗಸೆ, ಕೊತ್ತಂಬರಿ, ಪುದೀನಾ, ಪಾಲಾರ್, ಕಬ್ಬು, ಬಾಳೆ, ಅರಿಶಿನ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಅಲ್ಲದೇ ಹೈನುಗಾರಿಕೆ ಕೂಡ ಮಾಡ್ತಿದ್ದು, ಪ್ರತಿನಿತ್ಯ 1500 ರೂ. ಆದಾಯ ಗಳಿಸ್ತಿದ್ದಾರೆ. ಪ್ರಭಾಮಣಿಗೆ ಕುಟುಂಬದ ಎಂಟು ಮಂದಿಯೂ ಕೂಡ ಸಾಥ್ ಕೊಡ್ತಿದ್ದು, ಎಲ್ಲರೂ ಒಟ್ಟಿಗೆ ಜಮೀನಿನಲ್ಲಿ ದುಡಿಯುತ್ತಿದ್ದಾರೆ. ಆದ್ರಿಂದ ಹೊರಗಿನ ಕೂಲಿ ಆಳುಗಳಿಗೆ ಪರಿ ತಪಿಸುವ ಅವಶ್ಯಕತೆ ಬಂದಿಲ್ಲ ಎಮದು ಅವರು ಹೇಳುತ್ತಾರೆ.
ಒಟ್ಟಿನಲ್ಲಿ ಪುಸ್ತಕ ಓದಿದ್ರೆ ಪುಸ್ತಕದ ಬದನೆಕಾಯಿ ಕೆಲಸಕ್ಕೆ ಬರೊಲ್ಲ ಅನ್ನೋರಿಗೆ ಪ್ರಭಾಮಣಿ ಮಾದರಿಯಾಗಿದ್ದಾರೆ. ಅಲ್ಲದೆ ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡೋ ಮೂಲಕ ಯಶಸ್ಸು ಗಳಿಸಿದ್ದಾರೆ.