ಯು.ಎಸ್‌. ಕಾನ್ಸಲ್ ಜನರಲ್‌ ಆಗಿ ಜ್ಯುಡಿತ್‌ ರೇವಿನ್‌ ಅಧಿಕಾರ ಸ್ವೀಕಾರ

Public TV
1 Min Read
Judith Ravin

ಚೆನ್ನೈ: ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ಕಾನ್ಸಲ್‌ ಜನರಲ್ ಆಗಿ ಜ್ಯುಡಿತ್‌ ರೇವಿನ್‌ ಅವರು ಸೆಪ್ಟೆಂಬರ್‌ 6 ರಂದು ಅಧಿಕಾರ ಸ್ವೀಕರಿಸಿದ್ದಾರೆ.

“ಕೋವಿಡ್‌ ಸಾಂಕ್ರಾಮಿಕದ ಈ ಸಂಕಷ್ಟದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವುದು ನನ್ನ ಸೌಭಾಗ್ಯ. ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪ ಸಮೂಹ ಮತ್ತು ಲಕ್ಷದ್ವೀಪಗಳಲ್ಲಿ ಅಮೆರಿಕ ಮತ್ತು ಭಾರತಗಳ ಧ್ಯೇಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತೇನೆ.” ಎಂದು ಜ್ಯುಡಿತ್‌ ರೇವಿನ್‌ ಹೇಳಿದರು.

ಚೆನ್ನೈಗೆ ಆಗಮಿಸುವ ಮುನ್ನ ಕಾನ್ಸಲ್‌ ಜನರಲ್‌ ರೇವಿನ್‌ ಅವರು ಪೆರುವಿನ ಲಿಮಾದಲ್ಲಿ ಪಬ್ಲಿಕ್‌ ಅಫೇರ್ಸ್‌ ಕಾನ್ಸುಲರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮುನ್ನ ವಾಷಿಂಗ್ಟನ್‌ ಡಿ.ಸಿ. ಯಲ್ಲಿ ಹೈಟಿ ವಿಶೇಷ ಸಂಯೋಜನಾಧಿಕಾರಿಯವರ ಕಚೇರಿಯಲ್ಲಿ ಇಂಟರ್‌ನ್ಯಾಷನಲ್‌ ರಿಲೇಷನ್ಸ್‌ ಜನರಲ್‌ ಆಗಿದ್ದರು.

ಪಾಕಿಸ್ತಾನದ ಇಸ್ಲಮಾಬಾದ್‌, ಡೊಮಿನಿಕನ್‌ ರಿಪಬ್ಲಿಕ್‌ನ ಸ್ಯಾಂಟೊ ಡೊಮಿಂಗೊ; ಸೂಡಾನ್‌ನ ಖರ್ತೋಂ, ಕ್ಯಾಮರೂನ್ನ ಯುವಾಂಡೆ; ಹಾಗೂ ಮೆಕ್ಸಿಕೊನ ಸಿಯುಡಾಡ್‌ನ ಜುವಾರೆನ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

ಕಾನ್ಸಲ್‌ ಜನರಲ್‌ ರೇವಿನ್‌ ಅವರು ಅಮೆರಿಕ, ಸ್ಪೇನ್‌ ಮತ್ತು ಫ್ರಾನ್ಸ್‌ನಲ್ಲಿ ಪದವಿಪೂರ್ವ ಅಧ್ಯಯನ ಮಾಡಿದ್ದಾರೆ. ರೊಮಾನ್ಸ್ ಲ್ಯಾಂಗ್ವೇಜಸ್ ಅಂಡ್ ಲಿಟರೇಚರ್ಸ್ ವಿಷಯದಲ್ಲಿ ಹಾವರ್ಡ್‌ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜ್ಯುಡಿತ್‌ ರೇವಿನ್‌ ಅವರಿಗೆ ಸ್ಪಾನಿಷ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ಪ್ರೌಢಿಮೆ ಇದೆ. ರೇವಿನ್‌ ಅವರು ೨೦೦೩ ರಲ್ಲಿ ಸ್ಟೇಟ್‌ ಡಿಪಾರ್ಟ್ಮೆಂಟ್‌ನಲ್ಲಿ ಸೇವೆ ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *