ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಕೇಸ್ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ರವಿಶಂಕರ್ ಹೇಳಿಕೆ ಆಧರಿಸಿ ನಟಿ ರಾಗಿಣಿಯನ್ನು ಬಂಧಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ಆಧರಿಸಿ ನಿನ್ನೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಇವರನ್ನು ಕೂಡ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಮಹಿಳಾ ಸಾಂತ್ವನ ಕೇಂದ್ರದ ಒಂದೇ ಕೊಠಡಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಮಂಗಳವಾರ ರಾತ್ರಿಯನ್ನು ಕಳೆದಿದ್ದಾರೆ. ಐದು ಹಾಸಿಗೆಯುಳ್ಳ ಈ ಕೊಠಡಿಯಲ್ಲಿ ಒಬ್ಬರನೊಬ್ಬರ ಮುಖವನ್ನು ನೋಡಿಕೊಂಡು ಪ್ರತ್ಯೇಕವಾಗಿ ನಟಿಯರು ಕುಳಿತಿದ್ದರು ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
5 ಹಾಸಿಗೆಗಳ ಪೈಕಿ ಮೊದಲ ಮತ್ತು ಕೊನೆಯ ಹಾಸಿಗೆಯನ್ನು ಇಬ್ಬರಿಗೆ ನೀಡಿದ್ದರೆ ಮಧ್ಯದಲ್ಲಿರುವ ಮೂರು ಬೆಡ್‍ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಲಾಗಿತ್ತು. ರಾಗಿಣಿ ನೋಡಿ ನಟಿ ಸಂಜನಾ ಈಗ ಸಮಾಧಾನ ಆಯ್ತಾ ಕೇಳಿದ್ದಾರೆ. ರಾತ್ರಿ ಊಟ ಬೇಡ ಎಂದು ಹೇಳಿದ್ದ ಸಂಜನಾ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಕೆಪಿಎಲ್ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಯಾವುದೇ ಜಾಸ್ತಿ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
https://www.youtube.com/watch?v=vAzz6njMaKU