ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲಪಾಡ್‍ಗೆ ಕೊಡಿಸಲು ಹೋಗಿ ಡಿಕೆಶಿಗೆ ಮುಖಭಂಗ

Public TV
2 Min Read
nalapad dkshi

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲಪಾಡ್ ಗೆ ಕೊಡಿಸಲು ತಡರಾತ್ರಿವರೆಗೆ ರಾಜೀಸಂಧಾನ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇಂದು ಹೈಕಮಾಂಡ್ ಶಾಕ್ ನೀಡಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯಾರ ಹೆಸರನ್ನು ಅಧಿಕೃತವಾಗಿ ಪ್ರಕಟಿಸದಂತೆ ಹೈಕಮಾಂಡ್ ಬ್ರೇಕ್ ಹಾಕಿದೆ. ಅಲ್ಲದೆ ಈಗ ರಕ್ಷಾ ರಾಮಯ್ಯ ಅಧ್ಯಕ್ಷರಾಗಿದ್ದು, ಯಥವತ್ತಾಗಿ ಮುಂದುವರಿಯಲಿ ಎಂದು ಸೂಚಿಸಲಾಗಿದೆ.

raksha ramaiah nalapad

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಗಾದಿ ಬೆಳವಣಿಗೆ ಬಗ್ಗೆ ರಾಹುಲ್ ಗಾಂಧಿ ಅಸಮಧಾನ ಸಹ ವ್ಯಕ್ತಪಡಿಸಿದ್ದಾರೆ. ಪಕ್ಷದ ಆಂತರಿಕ ಚುನಾವಣೆ ನನ್ನ ಕನಸು ಅದನ್ನ ಹೀಗೆಲ್ಲಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಒಂದು ವರ್ಷ ರಕ್ಷಾ ರಾಮಯ್ಯ, 2 ವರ್ಷ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಡಿಕೆಶಿ ಸಭೆಯಲ್ಲಿ ತೀರ್ಮಾನ ಮಾಡಿದ್ದರು. ಆದರೆ ರಾಜ್ಯದ ಎಲ್ಲಾ ಬೆಳವಣಿಗೆ ಬಗ್ಗೆ ರಾಜ್ಯ ಕಾಂಗ್ರೆಸ್ಸಿನ ಮೂರನೇ ಬಣದ ಹಿರಿಯ ನಾಯಕರಿಂದ ಮಾಹಿತಿ ಪಡೆದ ರಾಹುಲ್ ಗಾಂಧಿ, ಇಂದು ಯಾವ ಪ್ರಕಟಣೆ ಮಾಡದಂತೆ ಡಿಕೆಶಿಗೆ ಸೂಚನೆ ನೀಡಿದ್ದಾರೆ.

rahul gandhi 3

ಈ ಮೂಲಕ ಯುವ ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಏನೂ ಮಾತನಾಡದಂತೆ ತಾತ್ಕಾಲಿಕ ಬ್ರೇಕ್ ನಿಂದ ನಾನು ಹೇಳಿದವರೆ ಅಧ್ಯಕ್ಷರು ನಾನು ಹೇಳಿದ್ದಷ್ಟು ಟರ್ಮ್ ಎಂದುಕೊಂಡಿದ್ದ ಡಿಕೆಶಿಗೆ ಹಿನ್ನಡೆ ಆಗಿದೆ. ರಾತ್ರೋರಾತ್ರಿ ನಲಪಾಡ್ ಪರ ಲಾಬಿ ಮಾಡಿ ಡಿಸೆಂಬರ್ ಗೆ ಅಧಿಕಾರ ಬಿಟ್ಟುಕೊಡುವಂತೆ ರಕ್ಷಾ ರಾಮಯ್ಯ ಮೇಲೆ ಡಿಕೆಶಿ ಒತ್ತಡ ತಂದಿದ್ದರು. ಆದರೆ ಇದೀಗ ರಾಹುಲ್ ಗಾಂಧಿ ಮಧ್ಯ ಪ್ರವೇಶದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕೃತ ಘೋಷಣೆಗೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ: ಶೀಘ್ರ ಸಂಪುಟ ವಿಸ್ತರಣೆ, ಜಾರಕಿಹೊಳಿ,ಮುನಿರತ್ನ ಸಚಿವರಾಗ್ತಾರೆ: ಸಚಿವ ನಾರಾಯಣ ಗೌಡ

DKSHI 6

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಕೆ ಎಂದು ಅಧಿಕೃತವಾಗಿಯೇ INDIAN YOUTH CONGRESS ವೆಬ್ ಸೈಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಧಿಕೃತವಾಗಿ ಮಾದ್ಯಮ ಹೇಳಿಕೆ ಪ್ರಕಟಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎರೆಯಲಾಗಿದೆ.ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿಯವರೆಗೂ ಡಿಕೆಶಿ ಸರಣಿ ಸಭೆ ನಡೆಸಿದ ಬೆನ್ನಲ್ಲೇ ಮಹತ್ವದ ಘೋಷಣೆಯನ್ನು ಎಐಸಿಸಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *