– ಶ್ರೀರಂಗಪಟ್ಟಣದಲ್ಲಿ ಪಾಳು ಬಿದ್ದ ದೇವಸ್ಥಾನಕ್ಕೆ ಕಾಯಕಲ್ಪ
ಮಂಡ್ಯ: ಗಿಡಗಂಟೆಗಳು ಬೆಳೆದು ಪಾಳುಬಿದ್ದಿದ್ದ ದೇವಸ್ಥಾನವನ್ನು ಜೀರ್ಣಾದ್ಧಾರ ಮಾಡಿದ ಯುವಾ ಬ್ರಿಗೇಡ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
A @yuva_brigade working in Karnataka demonstrates the ‘Can Do’ spirit and ‘Will Do’ approach of our youth.
What is equally gladdening is their pride towards India’s glorious culture.
Best wishes to this energetic team for their future endeavours. #MannKiBaat pic.twitter.com/ThyqHoDiYP
— Narendra Modi (@narendramodi) December 27, 2020
Advertisement
ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದ ಶಿವನ ದೇವಾಲಯದಲ್ಲಿ ಆರಂಭದಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ 45 ವರ್ಷಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಮರಿಯಪ್ಪ ಎಂಬುವರು ಮೃತಪಟ್ಟ ಬಳಿಕ ಪಾಳುಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿ, ಗಿಡಗಂಟೆಗಳು ಬೆಳೆದು, ವಿಷ ಜಂತುಗಳ ತಾಣವಾಗಿ ಪರಿವರ್ಗನೆಗೊಂಡಿತ್ತು.
Advertisement
Advertisement
ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವ ಬ್ರಿಗೇಡ್‍ನ ಯುವಕರ ತಂಡ ಎರಡು ತಿಂಗಳು ಪ್ರತೀ ಭಾನುವಾರ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನನು ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದರು. ಬಳಿಕ ಹೊಸ ಲಿಂಗ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯದ ಬಗ್ಗೆ ಇಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಯುವಕರನ್ನು ಗುಣಗಾನ ಮಾಡಿದ್ದಾರೆ.