ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರವನ್ನ ಅಭಿಮಾನಿಯೊಬ್ಬರು ವಿಶೇಷವಾಗಿ ಸ್ವಾಗತಿಸಿಕೊಂಡಿದ್ದಾರೆ.
ಕಲಾವಿದ ಮಂಜುನಾಥ್ ಹಿರೇಮಠ ಡಸ್ಟ್ ಆರ್ಟ್ ನಲ್ಲಿ ಯುವರತ್ನನ ಚಿತ್ರ ಬರೆದಿದ್ದಾರೆ. ಸಂಗಮ ಚಿತ್ರಮಂದಿರದ ಬಳಿ ಓಮ್ನಿ ಕಾರ್ ಹಿಂಬದಿಯ ಗ್ಲಾಸ್ ಮೇಲೆ ಪುನೀತ್ ಚಿತ್ರ ಬಿಡಿಸಿದ್ದಾರೆ. ಕರ್ನಾಟಕ ವಿವಿ ಹಾಗೂ ಕೆಸಿಡಿ ಕಾಲೇಜಿನಲ್ಲಿ ಯುವರತ್ನ ಸಿನಿಮಾ ಚಿತ್ರೀಕರಣ ನಡೆದಿದೆ. ಈ ಹಿನ್ನೆಲೆ ಕಾರ್ ಗ್ಲಾಸ್ ಮೇಲೆ ಕಾಲೇಜಿನ ಚಿತ್ರ ಬರೆದು ಯುವರತ್ನನಿಗೆ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.
ಇನ್ನೂ ವಾಹನದ ಅಕ್ಕಪಕ್ಕದ ಗ್ಲಾಸ್ ಗಳ ಮೇಲೆ ಮಾಸ್ಕ್ ಧರಿಸೋಣ, ಕೊರೊನಾ ವಿರುದ್ಧ ನಮ್ಮ ಪವರ್ ತೋರಿಸೋಣ ಎಂದು ತಮ್ಮ ಕಲೆ ಮೂಲಕ ಮಾಹಾಮಾರಿಯ ಜಾಗೃತಿ ಮೂಡಿಸಿದರು.