ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ 300 ಪುಟಗಳ ಚಾಟ್ ಹಿಸ್ಟರಿಯನ್ನು ಎಸ್‌ಐಟಿ ಪೊಲೀಸರಿಗೆ ನೀಡಲು ಯುವತಿ ಮುಂದಾಗಿದ್ದಾರೆ.
ಹೌದು. 300 ಪುಟಗಳ ಚಾಟಿಂಗ್ ಜೆರಾಕ್ಸ್ ಪ್ರತಿಯನ್ನು ಯುವತಿ ಪರ ವಕೀಲರು ತೆಗೆದುಕೊಂಡಿದ್ದು, ಇಂದು ಈ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಯುವತಿ ನೀಡುವ ಸಾಧ್ಯತೆಯಿದೆ. ಯುವತಿಗೆ ಜಾರಕಿಹೊಳಿ ದುಬಾರಿ ಬೆಲೆಯ ಬಂಗಾರವನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಎಸ್‌ಐಟಿಗೆ ನೀಡಲು ಮುಂದಾಗಿದ್ದಾರೆ.
ವಾಟ್ಸಪ್ ಚಾಟಿಂಗ್ ಲಿಸ್ಟ್ ನೀಡಿದರೂ ಯುವತಿ ಬಳಸುತ್ತಿದ್ದ ಮೊಬೈಲ್‌ನ್ನು ತನಿಖೆ ಸಂಬಂಧ ಎಸ್‌ಐಟಿ ಕೇಳಲಿದೆ. ಬಳಿಕ ಆ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.
ಜಾರಕಿಹೊಳಿ ಒಡನಾಟಕ್ಕೆ ಯುವತಿ ಪಶ್ಚಾತ್ತಾಪ ಪಟ್ಟಿದ್ದಾರೆ. ನಾನು ಕೆಲಸಕ್ಕೆ ಸೇರಿಕೊಳ್ಳುವ ಆಸೆಯಿಂದ ಸಹವಾಸ ಮಾಡಿದೆ. ನನ್ನ ಕುಟುಂಬದ ನಿರ್ವಹಣೆಯ ಸಲುವಾಗಿ ನನಗೆ ಕೆಲಸದ ಅವಶ್ಯಕತೆ ಇತ್ತು. ಹೀಗಾಗಿ ನಾನು ಸಹವಾಸೆ ಮಾಡಿದ್ದೆ ಎಂದು ಯುವತಿ ಎಸ್‌ಐಟಿ ಮುಂದೆ ಹೇಳಿರುವುದಾಗಿ ತಿಳಿದು ಬಂದಿದೆ.