– ಯುವಕ ಹಲ್ಲೆ ನಡೆಸಿದ್ದು ಯಾಕೆ..?
ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯನ್ನು ಗಗನ್ ಎಂದು ಗುರುತಿಸಲಾಗಿದೆ. ಯುವತಿಗೆ ಚಾಕು ಇರಿದ ನಂತರ ಗಗನ್ ಪೊಲೀಸರ ಮುಂದೆ ಹಾಜರಾಗಿದ್ದಾನೆ. ಇದನ್ನೂ ಓದಿ: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಯುವಕ!
ಗಗನ್ ಕಳೆದ 5 ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಅಲ್ಲದೆ 18 ವರ್ಷ ಆದ ನಂತರ ಆಕೆಯ ಮುಂದೆ ಮದುವೆ ಪ್ರಸ್ತಾಪ ಇಡಲು ಕಾಯುತ್ತಿದ್ದನು. ಇದೀಗ ಆಕೆಗೆ 18 ವರ್ಷ ಕಳೆದಿದ್ದು, ಮದುವೆ ಪ್ರಸ್ತಾಪವನ್ನು ಆಕೆಯ ಮುಂದಿಟ್ಟಿದ್ದಾನೆ. ಈ ವೇಳೆ ಯುವತಿ ಆತನನ್ನು ಮದುವೆ ಆಗಲು ನಿರಾಕರಿಸಿದ್ದಾಳೆ.
ಇತ್ತ ಯುವತಿ ಮನೆಯವರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯುವತಿ ಕೂಡ ನೀನು ಡ್ರೈವರ್ ಆಗಿದ್ದು, ಹೀಗಾಗಿ ನಿನ್ನನ್ನು ನಾನು ಮದುವೆ ಆಗಲ್ಲ ಎಂದು ನಿಂದಿಸಿದ್ದಳು. ಇದರಿಂದ ಬೇಸರಗೊಂಡ ಗಗನ್, ಯುವತಿಗೆ ಚಾಕು ಇರಿದಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.