ಮುಖದ ಮೇಲೆ ಸಣ್ಣದೊಂದು ಗುಳ್ಳೆ ಆದ್ರೆ ಅದೆಷ್ಟೋ ಮಹಿಳೆಯರು ದೊಡ್ಡ ಘಟನೆ ನಡೆದಂತೆ ಶಾಕ್ ಆಗ್ತಾರೆ. ಆ ಒಂದು ಗುಳ್ಳೆ ಹೋಗುವುದಕ್ಕಾಗಿ ಹಲವು ಕ್ರೀಮ್, ಮೆಥಡ್ ಗಳನ್ನ ಫಾಲೋ ಮಾಡ್ತಾರೆ. ಆದ್ರೆ ಪುರುಷರು ಸಣ್ಣ ಪುಟ್ಟ ಗುಳ್ಳೆ, ಕಲೆಗಳಿಗೆ ಕೇರ್ ಮಾಡಲ್ಲ. ಆದರೂ ಪ್ರತಿನಿತ್ಯದ ಲೈಫ್ ಸ್ಟೈಲಿನಲ್ಲಿ ರೋಟಿನ್ ಕೆಲಸಗಳ ನಡುವೆ ಮುಖ ತೊಳೆಯುವಾಗ ಕೆಲವೊಂದು ರೂಲ್ಸ್ ಫಾಲೋ ಮಾಡೋದರಿಂದ ಸುಂದರ ಮತ್ತು ಸ್ವಚ್ಛ, ಕಲೆ ರಹಿತ ಮುಖ ನಿಮ್ಮದಾಗುತ್ತೆ.
Advertisement
ಏನು ಮಾಡಬೇಕು?
* ಮುಖ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ. ಹೊರಗಿನಿಂದ ಬಂದಾಗ ಮುಖದ ಮೇಲೆ ಧೂಳಿನ ಕಣಗಳು ಅಂಟಿಕೊಂಡಿರುತ್ತವೆ. ಹಾಗಾಗಿ ಬಿಸಿ ನೀರು ಬಳಸಿದ್ರೆ ನಿಮ್ಮ ಫೇಸ್ ಫ್ರೆಶ್ ಆಗುತ್ತೆ. ಹಾಗಂತ ನೀರು ಅತಿ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು. ಅತಿ ಬಿಸಿ ನೀರು ಬಳಸಿದ್ರೆ ಮುಖದ ತ್ವಚೆ ಬೇಗನೆ ಸುಕ್ಕು ಗಟ್ಟುತ್ತೆ.
* ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಉತ್ತಮ ಬ್ರ್ಯಾಂಡ್ ನ ಫೇಸ್‍ವಾಶ್ ಕ್ರೀಂ ಅಥವಾ ಸೋಪ್ ಬಳಸಿ.
Advertisement
Advertisement
* ಮುಖ ತೊಳೆದ ಮೇಲೆ ಕತ್ತು, ಕಿವಿ ಭಾಗದಲ್ಲಿ ಸೋಪ್ ಅಥವಾ ಕ್ರೀಂ ನೊರೆ ಉಳಿಯದಂತೆ ನೋಡಿಕೊಳ್ಳಿ. ಒಂದು ನೊರೆ ಕಾಣಿಸಿಕೊಂಡ್ರೆ ಮತ್ತೊಮ್ಮೆ ಮುಖ ತೊಳೆಯಿರಿ. ಸ್ವಲ್ಪ ನೊರೆ ಅಂತ ಬಟ್ಟೆಯಿಂದ ಒರೆಸಿಕೊಳ್ಳಬೇಡಿ. ಈ ನೊರೆಯಿಂದಲೇ ಮುಖದ ಮೇಲೆ ಗುಳ್ಳೆ ಆಗಬಹುದು.
* ನಿಮ್ಮ ತ್ವಚೆಗೆ ಹೊಂದಿಕೊಳ್ಳುವಂತಹ ಫೇಸ್ ಪ್ರೊಡಕ್ಟ್ ಗಳನ್ನ ಬಳಸಿ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಮತ್ತು ಜಾಹೀರಾತಿಗೆ ಮರುಳಾಗಬೇಡಿ. ಈ ಬಗ್ಗೆ ಗೊಂದಲಗಳಿದ್ರೆ ವೈದ್ಯರ ಸಲಹೆ ಪಡೆದುಕೊಳ್ಳಿ.
Advertisement
ಏನು ಮಾಡಬಾರದು?
* ಸ್ನಾನದ ನಂತರ ದೇಹ ಒರೆಸಿಕೊಳ್ಳುವ ಟವೆಲ್ ನಿಂದ ಮುಖ ಒರೆಸಿಕೊಳ್ಳಬಾರದು. ಮುಖದ ಭಾಗಕ್ಕೆ ಪ್ರತ್ಯೇಕ ಟವೆಲ್ ಬಳಸಿ. ಕಂಕುಳ, ಕಾಲಿನ ಭಾಗದಲ್ಲಿ ಹೆಚ್ಚು ಬ್ಯಾಕ್ಟಿರಿಯಾಗಳಿರುತ್ತೆ. ಹಾಗಾಗಿ ಮುಖಕ್ಕಾಗಿ ಪ್ರತ್ಯೇಕ ಟವೆಲ್ ಮೇಂಟೇನ್ ಮಾಡಬೇಕು.
* ಕೆನ್ನೆ, ಕತ್ತು, ಹಣೆ ಭಾಗವನ್ನ ಜೋರಾಗಿ ಉಜ್ಜಿಕೊಳ್ಳಬೇಡಿ. ಒಮ್ಮೆ ಮುಖಕ್ಕೆ ನೀರು ಹಾಕಿ ಕ್ರೀಂ ಹಾಕಿ ನಿಧಾನಕ್ಕೆ ಮಸಾಜ್ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ರೆ ನಿಮ್ಮ ಸ್ಕಿನ್ ಹಾರ್ಡ್ ರೀತಿಯಲ್ಲಿ ಕಾಣಿಸುತ್ತೆ.
* ಪದೇ ಪದೇ ಕೆನ್ನೆಯನ್ನ ಎಳೆದುಕೊಳ್ಳಬೇಕು. ಇದರಿಂದ ಮುಖ ಜೋತು ಬಿದ್ದು ವಯಸ್ಕರ ರೀತಿಯಲ್ಲಿ ಕಾಣಿಸುತ್ತೀರಿ.