– ಓರ್ವನ ಕೊಲೆ, ಮತ್ತೋರ್ವ ಜೈಲುಪಾಲು
– ಇಬ್ಬರನ್ನೂ ಮೈಂಟೈನ್ ಮಾಡ್ತಿದ್ದ ಆಂಟಿ
ಚಿಕ್ಕಬಳ್ಳಾಪುರ: ಇಬ್ಬರು ಯುವಕರ ಜೊತೆ ವಿವಾಹಿತೆ ಸಂಬಂಧ ಹೊಂದಿದ್ದು, ಕೊನೆಗೆ ಓರ್ವನನ್ನು ಕೊಲೆ ಮಾಡುವ ಮೂಲಕ ಜೈಲುಪಾಲಾಗಿದ್ದಾಳೆ.
ಚಿಕ್ಕಬಳ್ಳಾಪುರದ ನ್ಯಾಯಾಲಯವೊಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದ ದೀಪಾ ಅನ್ನೋ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಅದೇನೋ ಚಟವೋ ಏನೋ ಚಿಕ್ಕಬಳ್ಳಾಪುರ ತಾಲೂಕು ಗುರುಕುನಾಗೇನಹಳ್ಳಿಯ ವಕೀಲ ನವೀನ್ ಅನ್ನೋನ ಜೊತೆ ಮೊದಲು ಅಕ್ರಮ ಸಂಬಂಧ ಹೊಂದಿದ್ದಳು. ಇದೂ ಸಾಲದು ಅಂತ ನ್ಯಾಯಾಲದಲ್ಲಿ ಆಟೆಂಡರ್ ಆಗಿದ್ದ ಮತ್ತೋರ್ವ ನವೀನ್ ಅನ್ನೋನ ಜೊತೆಯೂ ಸಹ ಅಕ್ರಮ ಸಂಬಂಧ ಶುರುವಿಟ್ಟುಕೊಂಡಿದ್ದಾಳೆ.
Advertisement
Advertisement
ಹೀಗಿರುವಾಗ ಅಟೆಂಡರ್ ನವೀನ್ ಜೊತೆ ದೀಪಾ ಚಕ್ಕಂದ ಆಡ್ತಿರೋದನ್ನ ಒಂದು ದಿನ ಅವರ ಮನೆಯಲ್ಲಿ ರೆಡ್ ಹ್ಯಾಂಡಾಗಿ ಕಂಡಿದ್ದ ವಕೀಲ ನವೀನ್ ಜಗಳ ಶುರು ಮಾಡಿದ್ದಾನೆ. ಈ ವೇಳೆ ಮೂವರ ನಡುವೆ ಜಗಳ ನಡೆದು, ಜಗಳವಾದ ದಿನ ವಕೀಲ ನವೀನ್ ಅಟೆಂಡರ್ ನವೀನ್ ಗೆ ಕೊಲೆ ಮಾಡಿಬಿಡ್ತೀನಿ ಅಂತ ಬೆದರಿಕೆ ಹಾಕಿ ಹೊರಟು ಹೋಗಿದ್ದ.
Advertisement
ಅದಾದ ಬಳಿಕವೂ ದೀಪಾ ಇಬ್ಬರನ್ನೂ ಮ್ಯಾನೇಜ್ ಮಾಡ್ತಾ ಚಕ್ಕಂದ ಆಡ್ತಿದ್ದಳು. ಆದರೆ ಅಟೆಂಡರ್ ನವೀನ್ ದೀಪಾಗೆ ವಕೀಲ ನವೀನ್ ಸಹವಾಸ ಬಿಡುವಂತೆ ಟಾರ್ಚರ್ ಕೊಡ್ತಿದ್ದನಂತೆ. ಈ ವಿಚಾರವಾಗಿ ವಕೀಲ ನವೀನ್, ಅಟೆಂಡರ್ ನವೀನ್ ಹಾಗೂ ದೀಪಾಳ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಹೀಗಿರುವಾಗ ವಕೀಲ ನವೀನ್ ಜೊತೆ ಸೇರಿದ ದೀಪಾ ಅಟೆಂಡರ್ ನವೀನ್ ನನಗೆ ಬಹಳ ಕಾಟ ಕೊಡ್ತಿದ್ದಾನೆ ಅವನನ್ನ ಹೇಗಾದ್ರೂ ಮಾಡಿ ಮುಗಿಸಿಬಿಡು ಅಂತ ಹೇಳಿದ್ಲಂತೆ.
Advertisement
ಹೀಗಾಗಿ ದೀಪಾ ಹಾಗೂ ವಕೀಲ ನವೀನ್ ಪ್ಲಾನ್ ಮಾಡಿ ಮೊದಲು ಇಬ್ಬರು ಫೋನ್ ಮಾಡಿ ಮಾತಾಡೋದನ್ನ ಸ್ವಲ್ಪ ದಿನ ಬಿಟ್ಟಿರೋಣ, ಅಮೇಲೆ ಅವನನ್ನ ಮರ್ಡರ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ವಕೀಲ ನವೀನ್ ತನ್ನ ಬಳಿ ಬಂದಿದ್ದ ಒಬ್ಬರು ಕಕ್ಷಿದಾರರಾದ ಯಲಹಂಕ ಮೂಲದ ಅನಿಲ್ ಹಾಗೂ ಕೃಷ್ಣಮೂರ್ತಿ ಅವರಿಗೆ ನನಗೆ ಹಾಗೂ ದೀಪಾಗೆ ಅಟೆಂಡರ್ ನವೀನ್ ಸಿಕ್ಕಾಪಟ್ಟೆ ಬೈಯ್ತಿದ್ದಾನೆ ಅವನನ್ನ ಮುಗಿಸಿಬಿಡಿ ನಾನು ನಿಮ್ಮ ಜಮೀನು ತಗಾದೆ ಸರಿಪಡಿಸಿಕೊಡ್ತೀನಿ ಅಂದಿದ್ದನಂತೆ.
ಡೀಲ್‍ಗೆ ಒಪ್ಪಿದ ಅನಿಲ್ ಹಾಗೂ ಕೃಷ್ಣಮೂರ್ತಿ, ಆಗಸ್ಟ್ 17 ರಂದು ಚಿಕ್ಕಬಳ್ಳಾಪುರಕ್ಕೆ ಬಂದು ಅಟೆಂಡರ್ ನವೀನ್ ನನ್ನ ಫಾಲೋ ಮಾಡಿದ್ದಾರೆ. ಪ್ರಶಾಂತನಗರದ ಮನೆಯವರೆಗೂ ಫಾಲೋ ಮಾಡಿಕೊಂಡು ಅಟೆಂಡರ್ ನವೀನ್ ಏಕಾಂಗಿಯಾಗಿ ವಾಸವಾಗಿದ್ದ ರೂಂನೊಳಗೆ ನುಗ್ಗಿದ್ದಾರೆ. ಈ ವೇಳೆ ನವೀನ್ ಕುತ್ತಿಗೆಗೆ ಜೀನ್ಸ್ ಪ್ಯಾಂಟ್ ಸುತ್ತಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರಂಭದಲ್ಲಿ ತನಿಖೆಗಿಳಿದ ಪೊಲೀಸರು ದೀಪಾಳನ್ನ ಕರೆಸಿ ವಿಚಾರಣೆ ನಡೆಸಿದ್ರೂ ಸತ್ಯ ಬಾಯ್ಬಿಟ್ಟಿರಲಿಲ್ಲ. ತದನಂತರ ಸೂಕ್ತ ಸಾಕ್ಷ್ಯಾಧಾರಗಳನ್ನ ಪತ್ತೆ ಹಚ್ಚಿದ ಪೊಲೀಸರು ವಕೀಲ ನವೀನ್ ಹಾಗೂ ದೀಪಾಳನ್ನ ಆರೆಸ್ಟ್ ಮಾಡಿ ಬಾಯಿ ಬಿಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಸದ್ಯ ಪ್ರಕರಣದಲ್ಲಿ ವಕೀಲ ನವೀನ್ ಹಾಗೂ ದೀಪಾ ಸೇರಿದಂತೆ ಕೃತ್ಯ ಮಾಡಿದ ಕಕ್ಷಿದಾರರಾದ ಅನಿಲ್ ಹಾಗೂ ಕೃಷ್ಣಮೂರ್ತಿ ಜೈಲುಪಾಲಾಗ್ತಿದ್ದಾರೆ.