– ಬೆದರಿಸಿ, ಕರೆಸಿಕೊಂಡು ರೇಪ್
– ಹುಡುಗಿಯನ್ನ ಕರೆ ತರುತ್ತಿದ್ದ ಚಾಲಕನಿಂದಲೂ ದುಷ್ಕೃತ್ಯ
ರಾಯ್ಪುರ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಿಸಲಾಪುರದ ಪೊಲೀಸ್ ಪೇದೆಗಳನ್ನಿಬ್ಬರನ್ನ ಎರಡು ತಿಂಗಳ ಬಳಿಕ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರು ಡೈಲ್ 112ರಲ್ಲಿ ಕೆಲಸ ಮಾಡಿಕೊಂಡಿದ್ದರು.
ಕೆಲ ತಿಂಗಳ ಹಿಂದೆ ಅಪ್ರಾಪ್ತೆ ಯುವಕನ ಜೊತೆ ಸಿಕ್ಕಿ ಬಿದ್ದಿದ್ದಳು. ಈ ವೇಳೆ ಪೇದೆಗಳು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಕಳುಹಿಸಿದ್ದರು. ನಂತರ ಅಪ್ರಾಪ್ತೆಯನ್ನ ಬೆದರಿಸಿ ತಮ್ಮ ಬಳಿ ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದರು. ಅಪ್ರಾಪ್ತೆಯನ್ನ ಕರೆತರಲು ಆಟೋ ಚಾಲಕನನ್ನು ಸಹ ಪೇದೆಗಳು ನೇಮಿಸಿದ್ದರು.
ಪೇದೆಗಳಿಂದ ಬೇಸತ್ತ ಅಪ್ರಾಪ್ತೆ ಅಕ್ಟೋಬರ್ ನಲ್ಲಿ ಸರ್ಕಾಂಡ್ ಪೊಲೀಸ್ ಠಾಣೆಯಲ್ಲಿ ದಊರು ದಾಖಲಿಸಿದ್ದಾಳೆ. ಆದ್ರೆ ಪೊಲೀಸರು ಆರಂಭದಲ್ಲಿ ಪೇದೆಗಳನ್ನ ರಕ್ಷಿಸಲು ಪೊಲೀಸರು ಮುಂದಾಗಿದ್ದರಿಂದ, ತನಿಖೆ ನಿಧಾನಗತಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದರು. ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಡಿಸೆಂಬರ್ 6ರಂದು ಇಬ್ಬರು ಪೇದೆಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಎಫ್‍ಬಿ ದೋಸ್ತಿ, ವಾಟ್ಸಪ್ ಚಾಟಿಂಗ್- 40ರ ಮಹಿಳೆ ಮೇಲೆ 30ರ ವ್ಯಕ್ತಿಯಿಂದ ರೇಪ್
ಆಟೋ ಚಾಲಕನಿಂದಲೂ ರೇಪ್: ಇನ್ನು ಪೇದೆಗಳ ಸೂಚನೆ ಮೇರೆಗೆ ಅಪ್ರಾಪ್ತೆಯನ್ನ ಕರೆ ತರುತ್ತಿದ್ದ ಆಟೋ ಚಾಲಕನನ್ನು ಸಹ ಬಂಧಿಸಲಾಗಿದೆ. ಆಟೋ ಚಾಲಕ ಮಾರ್ಗ ಮಧ್ಯೆ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದನು. ಆರೋಪಿಗಳ ಬಂಧನಕ್ಕೂ ಮುನ್ನ ಪೊಲೀಸರು ಅಪ್ರಾಪ್ತೆ ಜೊತೆ ರಾಜಿಗೆ ಮುಂದಾಗಿದ್ದರು. ಇದನ್ನೂ ಓದಿ: ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!
ತಾಯಿ ಪಕ್ಕ ಮಲಗಿದ್ದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ!
– 45ರ ಅಪ್ಪನಿಂದ ನೀಚಕೃತ್ಯhttps://t.co/3tz0pxnc9N#Father #Daughter #Police #KannadaNews
— PublicTV (@publictvnews) December 8, 2020