– ವಿಡಿಯೋ ನೋಡಿ ಮಾನವೀಯತೆ ಬದುಕಿದೆಯೆಂದ ನೆಟ್ಟಿಗರು
ಇಸ್ಲಾಮಾಬಾದ್: ಯುವಕನ ಕಣ್ಣೀರು ಕಂಡು ಮರುಗಿದ ದರೋಡೆಕೋರರು ಕಿತ್ತುಕೊಂಡ ವಸ್ತುಗಳನ್ನು ಮರಳಿ ವಾಪಸ್ ನೀಡಿರುವ ಮಾನವೀಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ.
Advertisement
We trying to find this rider and help him. Twitter do your thing and SPREAD. pic.twitter.com/MrgZNYkwVj
— Arham ???????? (@ArhamSayss) June 16, 2020
Advertisement
ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು ದರೋಡೆಕೋರರು. ಆತನ ಬಳಿ ಬಂದು ಹೆದರಿಸಿ ಅವನ ಜೇಬಿನಲ್ಲಿದ್ದ ಹಣ ಮತ್ತು ವಸ್ತುಗಳನ್ನು ಕಿತ್ತುಕೊಳ್ಳುತ್ತಾರೆ. ಈ ವೇಳೆ ಕಷ್ಟಪಟ್ಟು ದುಡಿದ ಹಣ ಹೀಗೆ ಕಿತ್ತುಕೊಂಡರಲ್ಲ ಎಂದು ಯುವಕ ಕಣ್ಣೀರು ಹಾಕುತ್ತಾನೆ.
Advertisement
Advertisement
ಯುವಕ ಕಣ್ಣೀರು ಹಾಕಿದ ಕೂಡಲೇ ಇದನ್ನು ಕಂಡ ದರೋಡೆಕೋರರು ಮನಸ್ಸನ್ನು ಚೇಂಜ್ ಮಾಡಿಕೊಳ್ಳುತ್ತಾರೆ. ಯುವಕ ಕಣ್ಣೀರು ನೋಡಿ ಕರಗಿದ ಕಳ್ಳರು ಕಿತ್ತುಕೊಂಡ ಹಣ ಮತ್ತು ವಸ್ತುಗಳನ್ನು ವಾಪಸ್ ನೀಡುತ್ತಾರೆ. ಜೊತೆಗೆ ಅವನಿಗೆ ಶೇಕ್ ಹ್ಯಾಂಡ್ ನೀಡಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಈಗ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದು, ದರೋಡೆಕೋರರ ಒಳ್ಳೆಯ ತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ನಂತರ ಮಾನವೀಯತೆ ಎಂಬುದು ಇನ್ನೂ ಬದುಕಿದೆ ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನನ್ನ ಕಣ್ಣಿನಲ್ಲಿ ನೀರು ತರಿಸತು. ಈ ವಿಡಿಯೋ ಕರುಣೆ ಮತ್ತು ಮಾನವೀಯತೆಯ ಬಗ್ಗೆ ತುಂಬಾ ಹೇಳುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.