ಮುಂಬೈ: ಸದಾ ಒಂದಲ್ಲ ಒಂದು ವಿವಾದದ ಮೂಲಕ ಸದ್ದು ಮಾಡುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫೋಟೋವೊಂದಕ್ಕೆ ಪೋಸ್ ನೀಡುವ ಮೂಲಕ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಯುವಕರ ಎದೆಬಡಿತ ಏರಿಸುವಂತಿದೆ ಎಂದೇ ಹೆಳಬಹುದು.
ಧಾಕಡ್ ಚಿತ್ರೀಕರಣಕ್ಕಾಗಿ ಯುರೋಪ್‍ನಲ್ಲಿರುವ ಕಂಗನಾ ಶೂಟಿಂಗ್ ಮುಗಿಸಿ ಇದೀಗ ಕೂಲ್ ಆಗಿ ಚಿತ್ರತಂಡದೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಈ ಮಧ್ಯೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಿಳಿ ಸಂಜೆಯಲ್ಲಿ ಕ್ರಿಮ್ ಕಲರ್ ಡ್ರಸ್ ತೊಟ್ಟು ಕಂಗನಾ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇನ್ನೂ ಈ ಫೋಟೋ ನೋಡಿದ ಅಭಿಮಾನಿಗಳು ಕಂಗನಾ ಹಾಟ್ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ. ಫೋಟೋ ಜೊತೆಗೆ ಪ್ರೀತಿಯಲ್ಲಿ ಹುಟ್ಟು, ಸಾವು ಇಲ್ಲ. ಅವರನ್ನು ನೋಡುತ್ತಾ ಬದುಕುವಾಗಲೇ ನಿಜವಾದ ಧೈರ್ಯ ಹೊರಬರುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಧಾಕಡ್ ಚಿತ್ರಕ್ಕೆ ನಿರ್ದೇಶಕ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸ್ಪೈ ಥ್ರಿಲ್ಲರ್ ಕಥಾಹಂದರವಾಗಿದ್ದು, ಈ ಚಿತ್ರದ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ಸತ್ ಅಭಿನಯಿಸಿದ್ದಾರೆ. ಜೊತೆಗೆ ಕಂಗನಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ ತಲೈವಿ ಚಿತ್ರದಲ್ಲಿ ಅಭಿನಯಿಸಿದ್ದು, ಕೋವಿಡ್ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನೂ ಓದಿ:ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್
View this post on Instagram