ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಎಕ್ಸಾಂ ಘೋಷಿಸಿದ ಮಧ್ಯಪ್ರದೇಶ

Public TV
1 Min Read
FotoJet 2 46

ಭೋಪಾಲ್: ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿಗಳನ್ನು ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓಪನ್ ಬುಕ್(ತೆರೆದ ಪುಸ್ತಕ)ಪರೀಕ್ಷೆ ನೀಡಲು ಮಧ್ಯ ಪ್ರದೇಶದ ಸರ್ಕಾರ ನಿರ್ಧರಿಸಿದೆ. ಈ ಮುನ್ನ ಸರ್ಕಾರ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ಓಪನ್ ಬುಕ್ ಎಕ್ಸಾಂ ಘೋಷಿಸಿತ್ತು.

JEE EXAM medium

ಈ ಕುರಿತಂತೆ ಮಧ್ಯಪ್ರದೇಶದ ಶಿಕ್ಷಣ ಸಚಿವ ಮೋಹನ್ ಯಾದವ್, ಕಾಲೇಜು ಹಾಗೂ ವಿಶ್ವ ವಿದ್ಯಾಲಯದಲ್ಲಿ ಯಾವುದೇ ರೀತಿಯ ದೈಹಿಕ ಪರೀಕ್ಷೆಗಳು ಇರುವುದಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದಂತೆಯೇ, ಯುಜಿ ಹಾಗೂ ಪಿಜಿ ಅಂತಿಮ ವರ್ಷದ ವಿದ್ಯಾರ್ಥಿಗಳು ಓಪನ್ ಬುಕ್ ಪರೀಕ್ಷೆಗಳು ನಡೆಸಲಾಗುತ್ತದೆ. ಆದರೆ ಕಾಲೇಜಿನಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ. ಜುಲೈ ಹೊತ್ತಿಗೆ ಎಲ್ಲ ಸಹಜ ಸ್ಥಿತಿಗೆ ಬರುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಮಧ್ಯ ಪ್ರದೇಶದ ಶಾಲಾ ಶಿಕ್ಷಣ ಇಲಾಖೆ ಈಗಾಗಲೇ 9 ಮತ್ತು 11ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಿದೆ.

Share This Article