ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…
Advertisement
ಬೇಕಾಗುವ ಸಾಮಗ್ರಿಗಳು:
* ಕಾಯಿ- 3 ಕಪ್
* ಬೆಲ್ಲ- 2 ಕಪ್
* ಹುರಗಡಲೆ- 1 ಟೇಬಲ್ ಸ್ಪೂನ್
* ಗಸಗಸೆ- 2 ಟೀ ಸ್ಪೂನ್
* ಏಲಕ್ಕಿ ಪುಡಿ – 1 ಟೀ ಸ್ಪೂನ್
* ಹೋಳಿಗೆ ರವೆ- ಕಾಲು ಕೆಜಿ
* ಮೈದಾಹಿಟ್ಟು- 100 ಗ್ರಾಂ
* ಅರಿಶಿನ- 1 ಟೀ ಸ್ಪೂನ್
* ಅಡುಗೆ ಎಣ್ಣೆ- 1 ಕಪ್
* ಉಪ್ಪು ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
* ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.
Advertisement
* ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
* ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
* ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.
* ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
* ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
* ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.