ಯುಗಾದಿಯಂದೇ 400 ವರ್ಷಗಳ ಇತಿಹಾಸವಿರುವ ಶಿವಲಿಂಗ ಕಳವು

Public TV
1 Min Read
mnd shivalinga theft

– ರಾತ್ರಿ ದೇವಸ್ಥಾನದ ಬೀಗ ಒಡೆದು ಶಿವಲಿಂಗ ಕದ್ದರು

ಮಂಡ್ಯ: ದೇವಾಲಯದ ಬೀಗ ಒಡೆದು ಪುರಾತನ ಶಿವಲಿಂಗವನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹಲ್ಲೇಗೆರೆ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆದಿದೆ.

vlcsnap 2021 04 13 18h10m03s208

ಹಲ್ಲೇಗೆರೆ ಗ್ರಾಮದ ಹೊರ ಭಾಗದಲ್ಲಿ 400 ವರ್ಷಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದೆ. ಕಾಶಿಯಿಂದ ತಂದು ಪ್ರತಿಷ್ಠಾಪಿಸಿದ್ದ ಶಿವಲಿಂಗವನ್ನು ಕಿಡಿಗೇಡಿಗಳು ಹೊತ್ತೋಯ್ದಿದ್ದಾರೆ. ರಾತ್ರಿ ದೇವಾಲಯದ ಬೀಗ ಒಡೆದು ಗರ್ಭ ಗುಡಿಯಲ್ಲಿದ್ದ ಶಿವಲಿಂಗವನ್ನು ಕದ್ದು ಪರಾರಿಯಾಗಿದ್ದಾರೆ.

vlcsnap 2021 04 13 18h09m49s360

ಬೆಳಗ್ಗೆ ಪೂಜೆ ಮಾಡಲೆಂದು ಅರ್ಚಕರು ದೇವಸ್ಥಾನಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ದಿನವೇ ಶಿವಲಿಂಗ ಕಳವು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *