ಮಡಿಕೇರಿ: ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಕಡಿಮೆ ಅಗುತ್ತಿದೆ.ಹೀಗಾಗಿ ನಮ್ಮ ಜಿಲ್ಲೆಗೆ ಪ್ರವಾಸಿಗರು ಬರುವುದುಬೇಡ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕೊರೊನಾ ಸೋಂಕು ಎಲ್ಲಾಕಡೆ ಇದೆ. ವೀಕೆಂಡ್‍ಗಳಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯದ ಪ್ರವಾಸಿಗರು ಎಂಟ್ರಿ ಕೋಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆ ಒಳಗೆ ಬಂದು ಬಿಟ್ಟರೆ ಸ್ವಯಂ ಕೃತ ಅಪರಾಧ ಅಗುತ್ತದೆ. ನಮ್ಮ ಜಿಲ್ಲೆಗೆ ಯಾವ ಪ್ರವಾಸಿಗರು ಬರೋದು ಬೇಡ ಎಂದಿದ್ದಾರೆ.
ಕೊಡಗಿಗೆ ಪ್ರವಾಸಿಗರು ಬರುವುದು ಸರಿ ಅಲ್ಲ. ಜಿಲ್ಲೆಯಲ್ಲಿ ದಿನನಿತ್ಯ ಕೊರೊನಾ ಸೋಂಕಿನ ಪ್ರಕರಣದ ಪಾಸಿಟಿವ್ ರೇಟ್ ಕಣ್ಣಾಮುಚ್ಚಾಲೆ ಅಡುತ್ತಿದೆ. ಹೀಗೆ ಇರುವ ಸಂದರ್ಭದಲ್ಲಿ ಟೆಸ್ಟಿಂಗ್ ರೇಟ್ ಕೋಡ ಜಿಲ್ಲೆಯಲ್ಲಿ ಜಾಸ್ತಿ ಮಾಡಿದ್ದೇವೆ. ರಾಜ್ಯದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಲ್ಲೂ ಕೊಡಗು ಜಿಲ್ಲೆಯ ಜನರು ಮುಂದೆ ಇದ್ದಾರೆ. ಹೀಗೆ ಇರುವ ಸಂದರ್ಭದಲ್ಲಿ ಹೋರ ಜಿಲ್ಲೆಯ ಹಾಗೂ ಹೋರ ರಾಜ್ಯದ ಪ್ರವಾಸಿಗರು ಬಂದು ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಸಿಗರನ್ನು ಜಿಲ್ಲೆ ಒಳಗೆ ಬಿಟ್ಟರೆ ನಾವೇ ಸ್ವಯಂ ಕೃತ ಅಪರಾಧವಾಗುತ್ತದೆ. ಹೀಗಾಗಿ ಪ್ರವಾಸಿಗರನ್ನು ತಡೆಯಬೇಕು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆ ಆದಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಬೋಪಯ್ಯ ತಿಳಿಸಿದ್ದಾರೆ.