ಲೆದರ್ ಜಾಕೆಟ್ ಎಲ್ಲಾ ಡ್ರೆಸ್‍ಗಳಿಗೂ ಡಿಫರೆಂಟ್ ಲುಕ್ ನೀಡುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ನೀವು ಚೆನ್ನಾಗಿ ನೋಡಿಕೊಂಡರೆ ಲೆದರ್ ಜಾಕೆಟ್‍ಗಳು ಹಲವಾರು ವರ್ಷಗಳ ಕಾಲ ಬಳಕೆಗೆ ಬರುತ್ತದೆ. ಕ್ಲಾಸಿಕ್ ಲುಕ್ ನೀಡುವ ಕಪ್ಪು ಬಣ್ಣದ ಲೆದರ್ ಜಾಕೆಟ್‍ಗಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೀಗ ಹಲವಾರು ಬಣ್ಣಗಳ ಲೆದರ್‍ಗಳು ಮಾರುಕಟ್ಟೆಗೆ ಬಂದಿದೆ. ಲೆದರ್ ಜಾಕೆಟ್ ಖರೀದಿಸುವಾಗ ಯಾವ ರೀತಿಯ ಲೆದರ್ ಜಾಕೆಟ್ ಖರೀದಿಸಬೇಕು. ಯಾವ ಉಡುಪಿನ ಜೊತೆಗೆ ಲೆದರ್ ಜಾಕೆಟ್ ಸೂಟ್ ಆಗುತ್ತದೆ. ಈ ಎಲ್ಲದರ ಕುರಿತಂತೆ ಕೆಲವು ಮಾಹಿತಿ ಈ ಕೆಳಗೆ ನೀಡಲಾಗಿದೆ.
Advertisement
ಕ್ಲಾಸಿಕ್ ಮೋಟೋ
ಕ್ಲಾಸಿಕ್ ಮೋಟೋ ಲೆದರ್ ಜಾಕೆಟ್ ಸಾಮಾನ್ಯವಾಗಿ ಎಲ್ಲರಿಗೂ ಸೂಟ್ ಆಗುತ್ತದೆ. ಸ್ತ್ರೀಯರು ಇದನ್ನು ಸ್ಕರ್ಟ್ ಜೊತೆಗೆ ಧರಿಸಿದರೆ ಬಹಳ ಸುಂದರವಾಗಿ ಕಾಣಿಸುತ್ತಾರೆ.
Advertisement
Advertisement
ಓವರ್ ಸೈಸಿಡ್ ಲೆದರ್ ಜಾಕೆಟ್
ಚಳಿಗಾಲದಲ್ಲಿ ಧರಿಸಿಲು ಓವರ್ ಸೈಸಿಡ್ ಲೆದರ್ ಜಾಕೆಟ್ ಉತ್ತಮವಾಗಿರುತ್ತದೆ. ಜೊತೆಗೆ ಬ್ಲಾಕ್ ಕಲರ್ ಜೀನ್ಸ್ ಪ್ಯಾಂಟ್‍ಗೆ ಈ ಜಾಕೆಟ್ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.
Advertisement
ಫ್ಯಾಕ್ಸ್ ಫುಲ್ ಲೆದರ್ ಜಾಕೆಟ್
ನೀಲಿ ಬಣ್ಣದ ಈ ಜಾಕೆಟ್ ಎಲ್ಲರ ಗಮನವನ್ನು ಬೇಗ ಸೆಳೆಯುತ್ತದೆ. ಸ್ಕರ್ಟ್ ಹಾಗೂ ಶೂ ಜೊತೆಗೆ ಈ ಜಾಕೆಟ್ ಧರಿಸಿದರೆ ರಿಚ್ ಲುಕ್ ನೀಡುತ್ತದೆ.
ಪೆಪ್ಲಮ್ ಟಾಪ್
ಲೆದರ್ ಅನ್ನು ಕೇವಲ ಜಾಕೆಟ್‍ಗೆ ಮಾತ್ರವಲ್ಲದೇ ಟಾಪ್‍ಗಳನ್ನು ತಯಾರಿಸಬಹುದು. ಈ ಟಾಪ್ ಸ್ಮಾರ್ಟ್ ಹಾಗೂ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ ಸೊಂಟದ ಮಧ್ಯೆ ಬೆಲ್ಟ್ ಅಳವಡಿಸಲಾಗಿದೆ.
ಬ್ರೈಟ್ ಲೆದರ್ ಜಾಕೆಟ್
ಸಾಕಷ್ಟು ಮಂದಿ ಬ್ರೈಟ್ ಲೆದರ್ ಜಾಕೆಟ್ ಅನ್ನು ಅಷ್ಟಾಗಿ ಖರೀದಿಸುವುದಿಲ್ಲ. ಆದರೆ ಈ ಜಾಕೆಟ್ ನೋಡಲು ನ್ಯಾಚುರಲ್ ಲುಕ್ ನೀಡುತ್ತದೆ. ದಪ್ಪವಾದ ಉಡುಪಿನ ಜೊತೆಗೆ ಈ ಜಾಕೆಟ್‍ನನ್ನು ಧರಿಸಬಹುದಾಗಿದೆ.