– ಭಟ್ಕಳದಲ್ಲಿ ಫೆ. 22 ರಂದು ಬೃಹತ್ ಪ್ರತಿಭಟನೆ
– ಪಂಚಮಸಾಲಿಗಳನ್ನು 2ಎಗೆ ಸೇರಿಸಿದರೆ ನಮ್ಮನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಿ
ಕಾರವಾರ : ಹಿಂದುಳಿದ 2ಎ ನಲ್ಲಿ ಬರುವ ಜನಾಂಗಕ್ಕೆ ಈಗಿರುವ ಸ್ಥಿತಿಯನ್ನೇ ಮುಂದುವರಿಸಬೇಕು. ಇಲ್ಲವೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಲಿಂಗಾಯಿತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗದ 2ಎಗೆ ಸೇರಿಸಬಾರದೆಂದು ಉಜಿರೆಯ ಶ್ರೀರಾಮಕ್ಷೇತ್ರ ಪೀಠ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ.
Advertisement
ಇಂದು ಭಟ್ಕಳದ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸಭೆ ನಡೆಸಿ ಮಾತನಾಡಿದ ಅವರು ಪಂಚಮಸಾಲಿ ಜನಾಂಗವನ್ನು ಹಿಂದುಳಿದ ಜನಾಂಗದ 2ಎ ಗೆ ಸೇರ್ಪಡಿಸುವುದನ್ನು ಖಂಡಿಸಿ ಇದೇ ತಿಂಗಳು 22 ರಂದು ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ಜನಾಂಗದ ಮುಖಂಡರು ಹಾಗೂ ಶಾಸಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
Advertisement
Advertisement
ಇದೇ ಸಂದರ್ಭದಲ್ಲಿ ನಾಯಕ ಜನಾಂಗದ ಮುಂಖಂಡ ಕೃಷ್ಣ ನಾಯ್ಕ ಮಾತನಾಡಿ, ಪಂಚಮಸಾಲಿಗಳನ್ನು 2ಎಗೆ ಸೇರಿಸುವುದಾದರೆ ನಮ್ಮ ಜನಾಂಗವನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಸಭೆಯಲ್ಲಿ ನಾಮದಾರಿ, ಗಾಣಿಗ, ಮಹಾಲೆ, ವೈಶ್ಯ, ದೈವಜ್ಞ, ದೇವಾಡಿಗ, ವಿಶ್ವಕರ್ಮ ಜನಾಂಗ ಪ್ರಮುಖ ಮುಖಂಡರು ಭಾಗವಹಿಸಿದ್ದರು.