ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ಗುಂಡೇಟಿಗೆ ಮೂವರು ಬಲಿಯಾಗಿದ್ದು, ಮೃತರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ಗಲಭೆ ಮಾಡಿ ಊರು ಬಿಟ್ಟ ಪುಂಡರು – ಎರಡು ಎಟಿಎಂ ಧ್ವಂಸ
ವಾಜಿದ್ ಖಾನ್ (20), ಯಾಸಿಂ ಪಾಷಾ (20) ಮತ್ತು ಮತ್ತೊಬ್ಬ 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ನಡೆದ ಪೊಲೀಸ್ ಫೈರಿಂಗ್‍ಗೆ ಇಬ್ಬರು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಮೃತಪಟ್ಟಿದ್ದಾನೆ. ಸದ್ಯಕ್ಕೆ ಗುಂಡಿಗೆ ಬಲಿಯಾದ ಮೂವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ ಟೆಸ್ಟ್ ಮಾಡಲು ಮೂವರ ಸ್ವಾಬ್ ತೆಗೆದುಕೊಳ್ಳಲಾಗಿದೆ. ಕೋವಿಡ್ ಟೆಸ್ಟ್ ಏನು ಬರುತ್ತೆ ಅಂತ ನೋಡಿಕೊಂಡು ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.
Advertisement
Advertisement
ಫೈರಿಂಗ್‍ನಲ್ಲಿ ಮೃತಪಟ್ಟರೆ ಫೋರೆನ್ಸಿಕ್ ಎಕ್ಸ್‌ಪರ್ಟ್ ವೈದ್ಯರು ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೀಗಾಗಿ ಬೋರಿಂಗ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಎಕ್ಸ್‌ಪರ್ಟ್ ಇದ್ದಾರೆ. ಆದ್ದರಿಂದ ಅವರಿಂದಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದು, ಮಂಗಳವಾರ ರಾತ್ರಿಯೇ ಆಸ್ಪತ್ರೆಯ ಸುತ್ತಮುತ್ತ ಭದ್ರತೆ ನಿಯೋಜನೆ ಮಾಡಿದ್ದಾರೆ.
Advertisement
Three people have died. Around 60 policemen injured, they've sustained stone injuries. Police vehicles were damaged & set on fire. A group entered a basement area where 200-250 vehicles were set on fire. Investigation on: Kamal Pant, Bengaluru City Police Commissioner pic.twitter.com/JrPUGsJDN7
— ANI (@ANI) August 12, 2020
Advertisement
ಇತ್ತ ಗುಂಡೇಟಿಗೆ ಬಲಿಯಾದ ವಾಜಿದ್ ಕುಟುಂಬಸ್ಥರು ಅನ್ಯಾಯದ ಸಾವು ಎಂದು ಬೋರಿಂಗ್ ಆಸ್ಪತ್ರೆ ಶವಾಗಾರದ ಬಳಿ ಕಣ್ಣೀರು ಹಾಕುತ್ತಿದ್ದಾರೆ. ವಾಜಿದ್ ಖಾನ್ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ನಾನು ಇಲ್ಲಿ ಗಲಾಟೆ ಶುರುವಾಗಿದ್ದು ನೋಡಿ ಅವರ ಮಾಲೀಕರಿಗೆ ಬೇಗ ಮನೆಗೆ ಕರೆದುಕೊಂಡು ಬಿಡುವಂತೆ ಹೇಳಿದ್ವಿ. ಅವರು ಕರೆದುಕೊಂಡು ಬಂದರು. ಆದರೆ ನಡೆದುಕೊಂಡು ಬರುವಾಗ ಫೈರಿಂಗ್ ಆಗಿದೆ. ನಮಗೂ ಈ ಘಟನೆಗೂ ಯಾವ ಸಂಬಂಧ ಇಲ್ಲ. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾದರು. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಗುಂಡೇಟಿಗೆ ಬಲಿಯಾದ ವಾಜಿದ್ ಚಿಕ್ಕಮ್ಮ ರೇಷ್ಮಾ ಕಣ್ಣೀರು ಹಾಕಿದ್ದಾರೆ.