ಬೆಂಗಳೂರು: ಗಂಭೀರವಾಗಿ ಇಲ್ಲದೇ ಇದ್ದರೂ ಆಸ್ಪತ್ರೆಗಳಿಗೆ ಕೋವಿಡ್ ಸೋಂಕಿತರು ಭಾರೀ ಸಂಖ್ಯೆಯಲ್ಲಿ ಅಡ್ಮಿಟ್ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆ ಹೋಮ್ ಐಸೋಲೇಷನ್‌ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
Advertisement
ಮಾರ್ಗಸೂಚಿಯಲ್ಲಿ ಏನಿದೆ?
– ಮನೆಯಲ್ಲೇ ಕ್ವಾರಂಟೈನ್ ಆಗುವ ವ್ಯಕ್ತಿಗಳು ಕುಟುಂಬ ಸದಸ್ಯರ ಜೊತೆ ಸಂಪರ್ಕ ಹೊಂದಿರಬಾರದು.
– ಕ್ವಾರಂಟೈನ್ ಸಮಯದಲ್ಲಿ ಸೋಂಕಿತರನ್ನು 24*7 ಸಮಯದಲ್ಲಿ ಸಂಪರ್ಕಿಸುವ ವ್ಯವಸ್ಥೆ ಇರಬೇಕು. ಆರೋಗ್ಯ ಸಿಬ್ಬಂದಿ/ ಮೆಡಿಕಲ್ ಅಧಿಕಾರಿಗೆ ಮಾಹಿತಿ ನೀಡಬೇಕು.
– ಸಣ್ಣ ಮಟ್ಟಿನ ಜ್ವರ 38 ಡಿಗ್ರಿ ಸೆಲ್ಸಿಯಸ್ ಅಥವಾ 100.4 ಡಿಗ್ರಿ ಫ್ಯಾರನ್‌ಹೀಟ್, ಆಮ್ಲಜನಕದ ಮಟ್ಟ 95% ಇರುವ ವ್ಯಕ್ತಿಗಳು ಕ್ವಾರಂಟೈನ್ ಆಗಬಹುದು.
Advertisement
Advertisement
– 60 ವರ್ಷ ಮೇಲ್ಪಟ್ಟ ಕೊಮೊರ್ಬಿಡ್ ಸ್ಥಿತಿಯಲ್ಲಿರುವ, ಮಧುಮೇಹ, ರಕ್ತದೊತ್ತಡ, ಹೃದಯ, ಕಿಡ್ನಿ ಸಮಸ್ಯೆ ಇರುವ ವ್ಯಕ್ತಿಗಳು ಮನೆಯಲ್ಲೇ ಕ್ವಾರಂಟೈನ್ ಆಗಬಹುದು. ಆದರೆ ಈ ವ್ಯಕ್ತಿಗಳು ಮೆಡಿಕಲ್ ಅಧಿಕಾರಿ ಅಥವಾ ಕುಟುಂಬದ ವೈದ್ಯರಿಂದ ಅನುಮತಿ ಪಡೆದಿರಬೇಕು.
– ಮನೆಯಲ್ಲೇ ಕ್ವಾರಂಟೈನ್ ಆಗುವ ವ್ಯಕ್ತಿಯ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯ ಇರಬೇಕು.
Advertisement
– ಒಂದು ವೇಳೆ ಮನೆಯಲ್ಲೇ ವ್ಯಕ್ತಿ ಕ್ವಾರಂಟೈನ್ ಆಗಿದ್ದರೂ ಆ ಮನೆ ಕ್ವಾರಂಟೈನ್‌ಗೆ ಪೂರಕವಾಗಿರದೇ ಇದ್ದರೆ ಆ ಸೋಂಕಿತ ವ್ಯಕ್ತಿಯನ್ನು ಕೋವಿಡ್ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ.
– ಮನೆಯಲ್ಲಿ ಕ್ವಾರಂಟೈನ್ ಆಗುವ ವ್ಯಕ್ತಿ ಪ್ರತಿನಿತ್ಯ ತನ್ನ ಆರೋಗ್ಯ ಮಾಹಿತಿಯನ್ನು ಮೆಡಿಕಲ್ ಅಧಿಕಾರಿ/ ಕುಟುಂಬದ ವೈದ್ಯರಿಗೆ ತಿಳಿಸಬೇಕು.