ಉಡುಪಿ: ಲವ್ ಜಿಹಾದ್ ಕಾನೂನು ತರಲು ಮುಂದಾಗಿರುವ ರಾಜ್ಯ ಸರ್ಕಾರವನ್ನು ಕುಟುಕಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕಾನೂನು ಜಾರಿಗೆ ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡಿ. ಯಾವ ಲೀಡರ್ ಮಕ್ಕಳು ಯಾರು ಯಾರನ್ನು ಲವ್ ಮಾಡಿದ್ದಾರೆ ತಿಳ್ಕೊಳ್ಳಲಿ. ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಅಂತ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಅಂದ್ರೆ ರಸ್ತೆಲಿ ಹೋಗೋರಲ್ಲ, ಸಂತೋಷ್ ಸಾಮಾನ್ಯ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲಾ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತೆ. ಎಲ್ಲಾ ವ್ಯವಹಾರಗಳು ನಮಗೆ ಗೊತ್ತಿದೆ. ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ ಎಂದರು.
ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ. ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಪತ್ನಿ ಹೇಳಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ಇಷ್ಟಾದ ಮೇಲೂ ವಿರೋಧ ಪಕ್ಷದ ಅಧ್ಯಕ್ಷನಾಗಿ ಕಣ್ಣುಮುಚ್ಚಿ ಕೂರೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಸಿ.ಡಿ ಇತ್ತೋ? ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ? ಎಲ್ಲಾ ಹೊರಬರಲಿ. ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು. ಈ ವಯಸ್ಸಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು, ಹೆಸರಿಗೆ ಕುಂದು ಬಂದಿರಬಹುದು. ಏನು ವ್ಯವಹಾರ ಏನು ರಾಜಕಾರಣ ಜನರಿಗೆ ತಿಳಿಸಿ. ಅದ್ಯಾಕೋ ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ಳುತ್ತಿದ್ದಾರೆ. ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲ. ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ನಮಗೂ ಗೊತ್ತು. ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ನಿದ್ದೇವೆ ಅಂದ್ರು. ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲ್ಲ ಅಂತ ಡಿಕೆಶಿ ಹೇಳಿದರು.
ನಮ್ಮ ಸರ್ಕಾರ ಬೀಳಲು ಡಿಕೆಶಿ ಕಾರಣ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಏನು ಬೇಕಾದ್ರೂ ಮಾತನಾಡಲಿ. ಕುಮಾರಸ್ವಾಮಿ ಹಿರಿಯರಿದ್ದಾರೆ. ಇಷ್ಟು ಬೇಗವಾದ್ರೂ ಹೇಳ್ತಾ ಇದ್ದಾರಲ್ವಾ ಎಂದು ಡಿಕೆಶಿ ವ್ಯಂಗ್ಯವಾಡಿದರು. ಇನ್ನೂ ಏನಾದ್ರೂ ಬಾಕಿಯಿದ್ರೆ ಹೇಳಲಿ ಸಂತೋಷ ಎಂದರು.