ಯಾದಗಿರಿ: ಕಳಪೆ ಗುಣಮಟ್ಟದಿಂದಾಗಿ ತೆಲಂಗಾಣದಲ್ಲಿ ನಿಷೇಧಿತ ಹತ್ತಿ ಬೀಜ, ಕಳೆನಾಶಕ ಹಾಗೂ ರಾಸಾಯನಿಕಗಳು ಗಡಿಭಾಗದ ಗುರುಮಠಕಲ್‍ನಲ್ಲಿ ಮಾರಾಟವಾಗುತ್ತಿವೆ. ಹೀಗೆ ಮಾರಾಟ ಮಾಡುವ ಬೀಜಗಳಿಗೆ ಯಾವುದೇ ಕ್ಯೂ ಆರ್ ಕೋಡ್ ಇರಲ್ಲ ಇದು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ. ತೆಲಂಗಾಣ ಸರ್ಕಾರವು ಕೆಲವು ಕಂಪನಿಗಳ ಉತ್ಪನ್ನ ಬೀಜಗಳನ್ನು ರೈತರು ಬಿತ್ತನೆ ಮಾಡುವುದನ್ನು ನಿಷೇಧಿಸಿದೆ.
ಅಲ್ಲಿನ ನಿಷೇಧದ ಬೀಜಗಳು ಇಲ್ಲಿ ಜೋರಾಗಿ ಮಾರಾಟ ನಡೆಯುತ್ತಿದೆ. ಗ್ಲೈಸರೀನ್ ಎಂಬ ಔಷಧಿಯನ್ನು ಮೇ 1 ರಿಂದ ಆಗಸ್ಟ್ 30 ರವರೆಗೆ ತೆಲಂಗಾಣದಲ್ಲಿ ರೈತರು ಬಳಸಲು ನಿಷೇದಿಸಿದೆ. ಈ ರಸಗೊಬ್ಬರ ಬಳಕೆಯಿಂದ ರೈತರ ಕಾಲುಗಳು ಸೀಳುತ್ತವೆ ಮತ್ತು ವಾತಾವರಣದ ಪರಿಣಾಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಅಲ್ಲಿ ನಿಷೇಧಿಸಲಾಗಿದೆ. ಆದರೆ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ತೆಲಂಗಾಣದ ಮದ್ದೂರ್, ಕೊಡಂಗಲ್, ಕಾನುಕುರ್ತಿ, ತಾಂಡೂರ್, ನಾರಾಯಣಪೇಟ್, ಇಟ್ಲಾಪೂರ್, ದಾಮರ್‍ಗಿಡ್ಡ, ಉಲಿಗುಂಡಂ ಮುಂತಾದ ಕಡೆಯ ರೈತರು ಗುರುಮಠಕಲ್ ಪಟ್ಟಣಕ್ಕೆ ಬಂದು ಹತ್ತಿ ಬೀಜಗಳನ್ನು ಖರೀದಿಸಲು ಬರುತ್ತಾರೆ.
ತೆಲಂಗಾಣಕ್ಕಿಂತ ಹೆಚ್ಚು ಗುರುಮಠಕಲ್‍ನಲ್ಲಿ ರಸಗೊಬ್ಬರಗಳ ಅಂಗಡಿಗಳಲ್ಲಿ ಹೆಚ್ಚಿನ ಮಾರಾಟ ಹಾಗೂ ವಿವಿಧ ತಳಿಗಳು ಮತ್ತು ಬಡ್ಡಿರಹಿತ ಸಾಲ ಸೌಲಭ್ಯ ದೊರಕುವ ಕಾರಣದಿಂದ ತೆಲಂಗಾಣದ ರೈತರು ಹತ್ತಿ ಬೀಜಗಳನ್ನು ಖರೀದಿಸಲು ಬರುತ್ತಾರೆ. ಈ ನಕಲಿ ಹತ್ತಿ ಬೀಜಗಳ ಬಿತ್ತನೆಯಿಂದ 1 ಎಕರೆಯಲ್ಲಿ 5 ಕ್ವಿಂಟಾಲ್ ಇಳುವರಿ ಬರುವುದಿಲ್ಲ. ಅಲ್ಲದೆ, ಭೂಮಿಯ ಫಲವತ್ತತೆ ಕೂಡಾ ನಾಶವಾಗುತ್ತೆ. ಆದ್ರೆ ತೆಲಂಗಾಣದಲ್ಲಿ ಇವುಗಳನ್ನ ನಿಷೇದಿಸಿದ್ರು ಗಡಿ ಭಾಗದ ಜಿಲ್ಲೆಯ ರೈತರಿಗೆ ಬೀಜೋತ್ಪನ್ನ ಕಂಪನಿಗಳು ಕದ್ದು ಮುಚ್ಚಿ ಮಾರಾಟ ನಡೆಸ್ತಿದ್ದಾರೆ. ಇದನ್ನೂ ಓದಿ: ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು