ಯಾದಗಿರಿ: ಜಿಲ್ಲೆಯಲ್ಲಿ ಮಳೆಯ ನರ್ತನ ಮುಂದುವರಿದಿದ್ದು, ಭಾರೀ ಮಳೆಗೆ ಹಳ್ಳ, ಕೊಳ್ಳ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಗ್ರಾಮೀಣ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಲಕಪ್ಪನಳ್ಳಿಯ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಮಲಕಪ್ಪನಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ರಸ್ತೆಯೇ ಕಾಣದಂತೆ ಸಂಪೂರ್ಣ ಕೊಚ್ಚಿಹೋಗಿದೆ. ಗಡಿ ಭಾಗದಲ್ಲಿರುವ ಈ ಗ್ರಾಮಕ್ಕೆ ಮತ್ತು ಕಲಬುರಗಿ ಜಿಲ್ಲೆಗೆ ಇದೇ ರಸ್ತೆ ಬಹಳಷ್ಟು ಆಸರೆಯಾಗಿತ್ತು. ಆದರೆ ಇದೀಗ ಸ್ವಲ್ಪವೂ ಕಾಣದಂತೆ ಕೊಚ್ಚಿಹೋಗಿದೆ.
ಮಳೆಯ ನೀರಿಗೆ ರಸ್ತೆ ಹಾಳಾಗಿದ್ದು, ಯಾವುದೇ ವಾಹನ ಇರಲಿ ಜನ ನಡೆದು ಹೋಗಲು ಸಹ ಪ್ರಯಾಸ ಪಡುವಂತಾಗಿದೆ. ರಸ್ತೆ ಕೊಚ್ಚಿ ಹೋಗಿ ಆಳವಾದ ಗುಂಡಿಗಳು ಬಿದ್ದಿದ್ದು, ಯಾವುದೇ ವಾಹನ ಸಂಚರಿಸಲು ಆಗದಂತಾಗಿದೆ.