ಯಾದಗಿರಿ: ಕೊರೊನಾ ಮಹಾಮಾರಿ ಆತಂಕ ನಡುವೆಯೆ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪದವಿ ಕಾಲೇಜುಗಳನ್ನು ಆರಂಭ ಮಾಡಿದೆ. ಆದರೆ ಆರೋಗ್ಯ ಇಲಾಖೆ ಎಡವಟ್ಟಿನಿಂದ ತರಗತಿಗಳು ಮಾತ್ರ ಇನ್ನೂ ಆರಂಭವಾಗಿಲ್ಲ.
ಹೌದು. ಯಾದಗಿರಿ ಜಿಲ್ಲೆಯ ಪದವಿ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳನ್ನು ಮರದ ಕೆಳಗೆ, ಕಾಲೇಜು ಮುಂದಿನ ಕಟ್ಟೆಯ ಮೇಲೆ, ಕಾಲೇಜು ಗೇಟ್ ಬಳಿ ಸಿಬ್ಬಂದಿ ಸ್ಟಾಪ್ ಮಾಡುತ್ತಿದ್ದಾರೆ. ಈ ಹಿಂದೆ ಜನರ ಕೊರೊನಾ ಟೆಸ್ಟ್ ವರದಿ ನೀಡುವಲ್ಲಿ ನಿಧಾನಗತಿ ಅನುಸರಿಸಿ ಜನರ ಜೀವನದ ಜೊತೆ ಆಟವಾಡಿದ್ದ ಆರೋಗ್ಯ ಇಲಾಖೆ, ಈಗ ವಿದ್ಯಾರ್ಥಿಗಳ ವಿಚಾರದಲ್ಲೂ ಅದೇ ಎಡವಟ್ಟು ಮಾಡುತ್ತಿದೆ. ಕಾಟಾಚಾರಕ್ಕೆಂಬಂತೆ ಟೆಸ್ಟಿಂಗ್ ಕಿಟ್ ತಂದು, ಕಾಲೇಜು ಮುಂದಿಡಲಾಗಿದೆ. ಆದರೆ ತಾಂತ್ರಿಕ ಸಮಸ್ಯೆ ಅಂತ ಟೆಸ್ಟ್ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ಸಿಗದೆ ಕಾಲೇಜ್ ಹೊರಗೆ ಕೂರುವಂತಾಗಿದೆ.
ಪ್ರಾಧ್ಯಾಪಕರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆನ್‍ಲೈನ್ ಕ್ಲಾಸ್ ನಡೆಸುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆ ಸರಿಯಾದ ಸಹಕಾರ ಸಿಗದ ಕಾರಣ ವಿದ್ಯಾರ್ಥಿಗಳು ರೆಗ್ಯೂಲರ್ ಕ್ಲಾಸ್ ಅಟೆಂಡ್ ಮಾಡ್ತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ.
ಒಟ್ಟಾರೆ ಯಾದಗಿರಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಪಡುವಂತಾಗಿದ್ದು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ವಿದ್ಯಾರ್ಥಿಗಳಿಗೆ ಪೂರಕ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.