ಮೈಸೂರು: ಯದುವಂಶದ ಯದುವೀರ್ ಹೆಸರಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಆಗಿದೆ. ಫೇಕ್ ಅಕೌಂಟ್ ಇರುವುದರ ಬಗ್ಗೆ ಸ್ವತಃ ಯದುವೀರ್ ಒಡೆಯರ್ ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.
It’s our moral obligation to support our farmers. Dear @narendramodi please address the agrarian problems..#IStandWithFarmers pic.twitter.com/F73v6ngOZo
— Yadhuveer K.C. Wodiyar. (@YaduveerWodiyar) February 4, 2021
ಟ್ವಿಟ್ಟರ್‌ನಲ್ಲಿ ಫೇಕ್ ಅಕೌಂಟ್ ಕ್ರೀಯೆಟ್ ಆಗಿದೆ ಎಂದು ಯದುವೀರ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಯದುವೀರ್ ಕೆ.ಸಿ. ಒಡೆಯರ್ ಎಂಬ ಹೆಸರಿನಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಆಗಿದ್ದು, ಅದರಲ್ಲಿ ರೈತರನ್ನ ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನ ಬಗೆಹರಿಸಿ ಎಂದು ಟ್ವೀಟ್ ಮಾಡಲಾಗಿದೆ.
ಟ್ವಿಟ್ಟರ್ ಖಾತೆಯ ಸ್ಕ್ರೀನ್‍ಶಾಟ್ ಜೊತೆ ಇನ್‍ಸ್ಟಾಗ್ರಾಂನಲ್ಲಿ ಸ್ಪಷ್ಟನೆಯನ್ನು ಯದುವೀರ್ ಅವರು ನೀಡಿದ್ದಾರೆ. ಇದೊಂದು ಫೇಕ್ ಅಕೌಂಟ್ ಆಗಿದೆ. ಇದು ನನ್ನ ಅಥವಾ ಮೈಸೂರು ಅರಮನೆಯ ಅಭಿಪ್ರಾಯವಲ್ಲ ಎಂದು ಪೋಸ್ಟ್ ಹಾಕಿ ಸ್ಪಷ್ಟಪಡಿಸಿದ್ದಾರೆ.