ಬೆಂಗಳೂರು: ರಾಕಿಂಗ್ ದಂಪತಿಯ ಪುಟ್ಟ ಕಂದಮ್ಮ ಯಥರ್ವ್‍ನ ಮುಡಿ ತೆಗೆದಿರುವ ಫೋಟೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯಶ್ ದಂಪತಿ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದಾದ ಮಕ್ಕಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಹಂಚಿಕೊಂಡಿರುವ ಫೋಟೋ ಕೊಂಚ ವಿಭಿನ್ನ ಮತ್ತು ವಿಶೇಷವಾಗಿದೆ.
ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋದಲ್ಲಿ ಮುದ್ದು ಮಗ ಯಥರ್ವ್‍ನನ್ನು ಯಶ್ ಎತ್ತಿಕೊಂಡಿದ್ದಾರೆ. ನಗುತ್ತಾ ಮಗನ ತಲೆಯನ್ನು ನೋಡುತ್ತಿದ್ದಾರೆ. ಮಗನ ಮುಡಿಯನ್ನು ತೆಗೆದಿರುವ ವಿಚಾರವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಯಥರ್ವ್‍ನ ಮುಡಿ ಕೊಟ್ಟಿರುವ ಫೋಟೋವನ್ನು ಹಾಕಿ ಮೊದಲು ಮತ್ತು ನಂತರ ಎಂಬ ಶೀರ್ಷಿಕೆಯನ್ನು ಕೊಟ್ಟು ಪೋಸ್ಟ್ ಮಾಡಿದ್ದಾರೆ.
View this post on Instagram
ಈ ಹಿಂದೆ ರಾಕಿಂಗ್ ದಂಪತಿ ಮುದ್ದು ಮಗಳ ಮುಡಿಯನ್ನು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ತೆಗೆಸಿ ಹರಕೆ ತೀರಿಸಿದ್ದರು. ಆಗ ತಂದೆ ಯಶ್‍ನನ್ನು ಮಗಳು ಐರಾ ಗರಂ ಆಗಿ ನೋಡುತ್ತಿರುವ ಫೋಟೋ ಸಖತ್ ವೈರಲ್ ಆಗಿತ್ತು.
ಐರಾ ಮತ್ತು ಯಥರ್ವ್ ತುಂಟಾಟದ ಫೋಟೋವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯವನ್ನು ರಾಧಿಕಾ ಪಂಡಿತ್ ಕೋರಿದ್ದರು. ಇದೀಗ ವರ್ಷದ ಆರಂಭದಲ್ಲಿ ಮತ್ತೊಂದು ಫೋಟೋವನ್ನು ಹಂಚಿಕೊಳ್ಳುವ ಮೂಲವಾಗಿ ಮಗನ ಮುಡಿ ತೆಗೆಸಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.