ಉಡುಪಿ: ಸಿಎಂ ಯಡಿಯೂರಪ್ಪ ವಿರುದ್ಧ ಸದಾ ತೊಡೆ ತಟ್ಟುತ್ತಿರುವ ಶಾಸಕ ಬಸನಗೌಡ ಪಾಟೀಲ್, ಯತ್ನಾಳ್ ಮತ್ತು ಸಚಿವ ಯೋಗೇಶ್ವರ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡುವ ಮೂಲಕ ದಾಳ ಉರುಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ ನೀಡಿ – ಹೈಕೋರ್ಟ್
ಉಡುಪಿ ಪ್ರವಾಸದ ವೇಳೆ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ್ ನಿರಾಣಿಗೆ ಹೈಕಮಾಂಡ್ ಬುಲಾವ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಯಾರನ್ನು ಬೇಕಾದರೂ ಬಿಜೆಪಿ ಸಿಎಂ ಮಾಡಲಿ. ಇದನ್ನು ಪ್ರಶ್ನಿಸುವುದು ಕಾಂಗ್ರೆಸ್‍ಗೆ ಕೆಲಸ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್ ಬಳಿ ಸರರ್ಕಾರ ಮಾಡಲು ನಂಬರ್ ಇಲ್ಲ. ಯಡಿಯೂರಪ್ಪನವರ ಬಗ್ಗೆ ಖಾಲಿ ಮಾತು ಯಾಕೆ ಮಾತನಾಡಲಿ? ಅವರ ಬಳಿ ನಂಬರ್ ಇದೆ ಸರರ್ಕಾರ ನಡೆಸುತ್ತಿದ್ದಾರೆ. ನಾವ್ಯಾಕೆ ನಮ್ಮದನ್ನು ಬಿಟ್ಟು ಅವರ ಬಗ್ಗೆ ಮಾತನಾಡಲಿ. ಅವರ ಪಾರ್ಟಿಯಲ್ಲಿ ಏನೇನೋ ಜೋರಾಗಿ ಶಬ್ದ ಮಾಡುತ್ತಿರುತ್ತವೆ. ಎಮ್ಟಿ ವೆಸಲ್ಸ್ ಮೇಕ್ ಮೋರ್ ಸೌಂಡ್ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಮೇಶ್ ಜಿಗಜಿಣಗಿಗೆ ಹೈಕಮಾಂಡ್ ಬುಲಾವ್
ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ ಎಂದು ಸಚಿವ ಯೋಗೀಶ್ವರ್ ಮತ್ತು ಶಾಸಕ ಯತ್ನಾಳ್‍ಗೆ ಪರೋಕ್ಷ ಟಾಂಗ್ ಕೊಟ್ಟರು. ರಾಜ್ಯದ ಭಿನ್ನಮತೀಯ ಬಿಜೆಪಿಗರು ಖಾಲಿ ಪಾತ್ರೆಯೆಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.