– ವಿಜಯೇಂದ್ರ ಎದುರು ಕಣ್ಣೀರಿಟ್ಟ ಮಹಿಳೆ
ಚಿಕ್ಕಮಗಳೂರು: ನಾನು ಆವತ್ತೇ ಹೇಳಿದ್ದೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಪ್ರೀತಿಯಿಂದ ಹೀಗೆಲ್ಲ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಸರವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿಕೆ ನೀಡಿದ್ದಾರೆ.
Advertisement
ಚಿಕ್ಕಮಗಳೂರಿನಲ್ಲಿ ನಡೆದ ಬಸವ ತತ್ವ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತ, ನರೇಂದ್ರ ಮೋದಿ ಬೆಂಬಲಿಗ ಹಾಗೂ ಓರ್ವ ಹಿಂದೂ ಕಾರ್ಯನಾಗಿರುವ ಕಾರಣ ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಶಾಸಕ ಯತ್ನಾಳ್ ಅವರು ಹಿರಿಯರು ಹಾಗೂ ನನ್ನ ಮೇಲಿನ ಪ್ರೀತಿಯಿಂದ ಅವರು ಆ ರೀತಿ ಮಾತನಾಡುತ್ತಾರೆ. ಅದಕ್ಕೆ ನನಗೆ ಬೇಸರವಿಲ್ಲ ಎಂದರು.
Advertisement
Advertisement
ನಂತರ ಜಾರಕಿಹೊಳಿ ಸಿಡಿ ಕುರಿತಂತೆ ಮಾತನಾಡಿದ ವಿಜಯೇಂದ್ರ, ಸಿಡಿ ಪ್ರಕರಣದ ಬಗ್ಗೆ ಎಸ್‍ಐಟಿ. ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಏನೆಂದು ತನಿಖೆಯ ಬಳಿಕ ಹೊರಬರಬೇಕಿದೆ. ಇದರ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ? ಸಿಡಿ ಹಿಂದೆ ಅಗ್ರಗಣ್ಯ ನಾಯಕರು ಯಾರು ಸೇರಿಕೊಂಡಿದ್ದಾರೆಂದು ಬಹುಶಃ ತನಿಖೆಯ ಬಳಿಕ ಗೊತ್ತಾಗಲಿದ್ದು, ಅಲ್ಲಿವರೆಗೂ ಕಾಯಬೇಕಷ್ಟೆ ಎಂದು ಅಭಿಪ್ರಾಯಪಟ್ಟರು.
Advertisement
ವಿಜಯೇಂದ್ರ ಎದುರು ಮಹಿಳೆ ಕಣ್ಣೀರು :
ಕಾರ್ಯಕ್ರಮ ಮುಗಿಸಿ ಹೊರಟ ವಿಜಯೇಂದ್ರ ಕಾರಿನ ಬಳಿ ಬಂದ ಚಿಕ್ಕಮಗಳೂರಿನ ಮಮತಾ ಎಂಬವರು ವಿಜಯೇಂದ್ರ ಮುಂದೆ ಅಳಲು ತೋಡಿಕೊಂಡು ಕಣ್ಣೀರಿಟ್ಟು, ನಮಗೆ ನ್ಯಾಯ ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿಸಿ ಎಂದು ಗೋಳಾಡಿದರು. ಚಿಕ್ಕಮಗಳೂರಿನ ಪ್ರಸನ್ನ ಎಂಬವರ ಕುಟುಂಬ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಕುಂದೂರು ಬಳಿ 57 ಎಕರೆ ತೋಟವನ್ನ ಖರೀದಿ ಮಾಡಿದೆ. ರಿಜಿಸ್ಟರ್ ಆಗಿಲ್ಲ. ಕೇಸ್ ನ್ಯಾಯಾಲಯದಲ್ಲಿದೆ. ಆದರೆ, ತರೀಕೆರೆ ರಾಜಕೀಯ ಮುಖಂಡರ ಬೆಂಬಲಿಗರು ನಮಗೆ ತೋಟಕ್ಕೆ ಹೋಗಲು ಬಿಡುತ್ತಿಲ್ಲ. ಹೋದಾಗ ಹಲ್ಲೆ ಮಾಡುತ್ತಾರೆ. ಈಗಾಗಲೇ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ದೂರು ಕೊಟ್ಟರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿಜಯೇಂದ್ರ ಅವರ ಎದುರೇ ನೆಲಕ್ಕೆ ಬಿದ್ದು ಹೊರಳಾಡಿದರು. ನಮಗೆ ಯಾರಿಂದಲೂ ನ್ಯಾಯ ಸಿಗುತ್ತಿಲ್ಲ. ಪೊಲೀಸರಿಂದ ದೌರ್ಜನ್ಯವಾಗುತ್ತಿದೆ. ನೀವಾದರು ನ್ಯಾಯ ಕೊಡಿಸಿ ಎಂದು ಬೇಡಿಕೊಂಡರು. ವಿಜಯೇಂದ್ರ ಕೂಡ ನ್ಯಾಯ ಕೊಡಿಸುವ ಭರವಸೆ ನೀಡಿ ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದರು.
ಮಮತಾ ವಿಜಯೇಂದ್ರನ ಬಳಿ ಅವಲತ್ತು ತೋಡಿಕೊಂಡರು. ನೇರವಾಗಿ ತರೀಕೆರೆ ಶಾಸಕ ಸುರೇಶ್ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಹೇಳದ ಪ್ರಸನ್ನ ಅವರ ಕುಟುಂಬ ತರೀಕೆರೆ ಪ್ರಭಾವಿ ರಾಜಕೀಯ ಮುಖಂಡರು ತಮ್ಮ ಬೆಂಬಲಿಗರು ಮೂಲಕ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸುರೇಶ್ ವಿರುದ್ಧ ಆರೋಪಿಸಿದ್ದಾರೆ. ಪೊಲೀಸರಿಂದಲೂ ನಮಗೆ ನ್ಯಾಯ ಸಿಗುತ್ತಿಲ್ಲ. ಅವರು ಹೊಡೆದಿರುವ ಫೋಟೋ ಹಾಗೂ ವಿಡಿಯೋಗಳನ್ನು ಕೊಟ್ಟರೂ ಪೊಲೀಸರು ಅವರ ಪರವೇ ಇದ್ದಾರೆ ಎಂದು ದೂರಿದರು.