– ಎಲ್ಲರೂ ವ್ಯಾಕ್ಸಿನ್ ತಗೊಳ್ಳಿ
– ಪಕೋಡ ಮಾರೋಣ ಅಂದ್ರೆ ಎಣ್ಣೆ ರೇಟ್ ಜಾಸ್ತಿ
ಚಿಕ್ಕಬಳ್ಳಾಪುರ: ಕೊರೊನಾಗೆ ವ್ಯಾಕ್ಸಿನೇಷನ್ ಒಂದೇ ಮದ್ದಾಗಿದೆ. ಪ್ರತಿಯೊಬ್ಬರೂ ಎರಡು ಬಾರಿ ತಪ್ಪದೇ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಜನರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
Advertisement
ಕ್ಷೇತ್ರದ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಆಯೋಜಿಸಿದ್ದ ಪುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಎರಡು ವ್ಯಾಕ್ಸಿನ್ ಇದೆ ಯಾವಾದಾದರು ಪಡೆದುಕೊಳ್ಳಿ, ಸ್ಪುಟನಿಕ್ ಫೈಜರ್ ಸಹ ದೇಶಕ್ಕ ತರಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. 136 ಕೋಟಿ ಇರುವ ದೇಶ 100 ಕೋಟಿ ಜನರಿಗೆ ವ್ಯಾಕ್ಸಿನ್ ಮಾಡಿದರೆ ಕೊರೊನಾಗೆ ತಡೆ ಯೊಡ್ಡಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರಮೋದಿ ಭಾರತದ ಜನರಿಗೆ ವ್ಯಾಕ್ಸಿನ್ ಮಾಡುವ ಬದಲು ಬೇರೆ ದೇಶದ ಜನರಿಗೆ ಆರೂವರೆ ಕೋಟಿ ಲಸಿಕೆ ಕಳುಹಿಸಿದ್ದಾರೆ. ವ್ಯಾಕ್ಸಿನ್ ಕಾರ್ಯ ವೇಗ ಮಾಡಬೇಕಾದ ಯಡಿಯೂರಪ್ಪ ನಿದ್ದೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಕೊಡೋ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
Advertisement
Advertisement
ಕಾಗೋಡು ತಿಮ್ಮಪ್ಪನವರಿಗೆ ವ್ಯಾಕ್ಸಿನ್ ಸಿಕ್ಕಿಲ್ಲ. ವ್ಯಾಕ್ಸಿನ್ ಪಡೆಯಲು ಬಂದವರನ್ನ ವಾಪಾಸ್ ಕಳುಹಿಸಿದ್ದಾರೆ. ನರೇಂದ್ರ ಮೋದಿ ಸುಳ್ಳುಗಾರ ಅವರಷ್ಟು ಸುಳ್ಳು ಹೇಳೋ ಪ್ರಧಾನಿ ಬೇರೆ ಯಾರೂ ಇಲ್ಲ ಅಚ್ಚೇ ದಿನ್ ಬರುತ್ತೆ ಅಂದ್ರಿ? ಎಲ್ಲಿ ಅಚ್ಛೆ ದಿನ್? ಎಂದು ಅಂತ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಓಲಗವಿಲ್ಲ, ಸಂಬಂಧಿಕರಿಲ್ಲ- 500 ರೂಪಾಯಿಯಲ್ಲಿ ಸಿಂಪಲ್ ಮದುವೆ
Advertisement
ಜೆಡಿಎಸ್ನವರು ಸಹ ಬೆಂಕಿ ಬಿದ್ದ ಮನೆಯಲ್ಲಿ ಗಳ ಕಾಯೋರು ಅಂತ ಜೆಡಿಎಸ್ ಪಕ್ಷದ ವಿರುದ್ದವೂ ಕಿಡಿಕಾರಿದ್ರು. ಬಿಜೆಪಿ ಸರ್ಕಾರ ಬಂದು ದೇಶ ರಾಜ್ಯ ಹಾಳು ಮಾಡಿದ್ದಾರೆ. ಕೆಲಸ ಕೇಳಿದರೆ ಪಕೋಡ ಮಾರಿ ಅಂದ್ರು, ಪಕೋಡ ಮಾರೋಣ ಅಂದ್ರೆ ಎಣ್ಣೆ ರೇಟ್ ಜಾಸ್ತಿ ಮಾಡಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ
ಕೊರೊನಾ ಕಡಿಮೆ ಮಾಡಿ ಅಂದರೆ ಚಪ್ಪಾಳೆ, ಜಾಗಟೆ ಬಾರಿಸಿ ಅಂತಾರೆ. ಇಂತಹ ಪ್ರಧಾನಿ ಯಾರಾದರೂ ಬಂದಿದ್ರಾ.? ಲಾಕ್ಡೌನ್ ಮಾಡಿದ್ದೀರಿ ಜನತೆಗೆ ಕೆಲಸ ಕಾರ್ಯ ಇಲ್ಲ. ಬಡವರಿಗೆ 10000 ಕೊಡಿ 10ಕೆಜಿ ಅಕ್ಕಿ ಕೊಡಿ ಅಂತ ಯಡಿಯೂರಪ್ಪ ಹತ್ತಿರ ಅಂದಿದ್ದೀರಾ ಆದರೆ ಯಡಿಯೂರಪ್ಪ ಜಪ್ಪಯ್ಯ ಅಂದರೂ ಕೊಡಿಲಿಲ್ಲ. ಯಡಿಯೂರಪ್ಪ ಸರ್ಕಾರ ರಾಕ್ಷಸ ಸರ್ಕಾರವಾಗಿದೆ. ಮನುಷ್ಯತ್ವ ಇಲ್ಲದ ಸರ್ಕಾರ, ಮಾನ ಮರ್ಯಾದೆ ಇಲ್ಲ. ಈ ಸರ್ಕಾರಕ್ಕೆ ಚರ್ಮ ದಪ್ಪ ಆಗಿದೆ ದಬ್ಬಣ ಹಾಕಿ ಚುಚ್ಚಿದರೂ ಏನೂ ಆಗಲ್ಲ. ಯಾರಿಗೂ ಕೋವಿಡ್ ಪರಿಹಾರದ ಹಣ ಬಂದಿಲ್ಲ. ಎಲ್ಲ ದುಡ್ಡು ಅವರೇ ಹೊಡೆತಿದ್ದಾರೆ ಜೆಸಿಬಿ ತಗೊಂಡು ಬಾಚಿತಿದ್ದಾರೆ. ಇದು ಕೆಟ್ಟ ಸರ್ಕಾರ ಈ ಸರ್ಕಾರ ಕಿತ್ತೊಗೆಯಬೇಕು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಬಾರಿ ಮತ ಹಾಕಬೇಕು ಎಂದು ಮನವಿ ಮಾಡಿದ್ದಾರೆ.