ಯಡಿಯೂರಪ್ಪ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

Public TV
1 Min Read
RENUKA

ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಕದಲ್ಲಿ ಒಂದು ಕ್ಷೇತ್ರ ಗೆಲ್ಲಿಸಿಕೊಳ್ಳುವ ತಾಕತ್ತಿಲ್ಲದವರು ಯಡಿಯೂರಪ್ಪ ಬಗ್ಗೆ ಮಾತಾಡ್ತಾರೆ. ಯತ್ನಾಳ್ ಹುಚ್ಚು ಹುಚ್ಚಾಗಿ ಮಾತಾಡ್ತಿದ್ದಾರೆ. ಅವರ ವಿರುದ್ಧ ಏನೂ ಕ್ರಮ ಆಗಿಲ್ಲ. ಕಳೆದ ವಾರ 18 ಶಾಸಕರು ಹೋಗಿ, ನಾವು ಬೇಕಾದರೆ ದೆಹಲಿಗೆ ಹೋಗ್ತಿವಿ ಅಂದಿದ್ದೆವು. ಅಂತದ್ದು ಏನು ಸಮಸ್ಯೆ ಇಲ್ಲ ಅಂತ ಯಡಿಯೂರಪ್ಪ ಹೇಳಿದರು. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

bsy medium

ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೆ ಕೊವೀಡ್ ಸಂದರ್ಭದಲ್ಲಿ ಕೆಲವರು ದೆಹಲಿಗೆ ಹೋಗಿ ಏನೇನೋ ಮಾಡೋದು ಸರಿಯಲ್ಲ ಯಡಿಯೂರಪ್ಪನವರು ಇಳಿ ವಯಸ್ಸಿನಲ್ಲೂ ಸಮರ್ಥವಾಗಿ ಕೊವೀಡ್ ತಡೆಗೆ ಶ್ರಮಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಬಿಎಸ್‍ವೈ ಸಿಎಂ ಆಗಿರೋದು ಅಷ್ಟೇ ಸತ್ಯ: ರೇಣುಕಾಚಾರ್ಯ

RENUKA 1 medium

ಯಡಿಯೂರಪ್ಪ ಅವರಿಗೆ ಯಾರೋ ಒಂದಿಬ್ಬರು ಅಪಪ್ರಚಾರ ಮಾಡುವ ಕೆಲಸ ಮಾಡ್ತಿದ್ದಾರೆ. ನಾನು ಇದರ ಬಗ್ಗೆ ಅವರ ಜೊತೆ ಚರ್ಚೆ ಮಾಡ್ತೇನೆ. ನಾವು ಯಡಿಯೂರಪ್ಪ ಜೊತೆಗಿದ್ದೇವೆ. ಕೆಲವರಿಗೆ ಪಕ್ಕದ ಕ್ಷೇತ್ರ ಗೆಲ್ಲಿಸುವ ತಾಕತ್ತು ಇಲ್ಲ. ಆದರೂ ಕೆಲವರು ಅವರ ಬಗ್ಗೆ ಮಾತನಾಡ್ತಾರೆ. ಇದನ್ನು ಪ್ರತಿಪಕ್ಷ ಗಳು ಸದುಪಯೋಗ ಮಾಡಿಕೊಳ್ತಾರೆ. ಚುನಾವಣೆಯಲ್ಲಿ ಸೋತವರು ಕೈಕಾಲು ಹಿಡಿದು, ಬೆಗ್ ಮಾಡಿ ಮಂತ್ರಿ ಆಗಿದ್ದಾರೆ. ಬೇರೆ ಬೇರೆ ಪಕ್ಷಕ್ಕೆ ಹೋಗಿ, ಬೇರೆ ಬೇರೆ ಪಕ್ಷದಲ್ಲಿ ಓಡಾಡಿ ಸೈಕಲ್ ಹತ್ತಿ ಇಳಿದವರು ಯಡಿಯೂರಪ್ಪ ನವರ ನಾಯಕತ್ವದ ಬಗ್ಗೆ ಮಾತನಾಡ್ತಾರೆ ಎಂದು ಹೆಸರು ಹೇಳದೇ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ: ಶೆಟ್ಟರ್

RENUKA 2 medium

ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡ್ತಿದೀರಿ ಎಂದು ಅರುಣ್ ಸಿಂಗ್ ಹಾಗೂ ಪ್ರಹ್ಲಾದ್ ಜೋಷಿ ಕರೆ ಮಾಡಿದ್ದರು ಎಂದೂ ಇದೇ ವೇಳೆ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *