ಯಡಿಯೂರಪ್ಪ ರಾಜಾಹುಲಿ, ಹುಲಿಗೆ ಇನ್ ಡೈರೆಕ್ಟ್ ಆಡಳಿತ ಗೊತ್ತಿಲ್ಲ: ಆರ್ ಅಶೋಕ್

Public TV
1 Min Read
ashok 1

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಚಾಮರಾಜನಗರದಲ್ಲಿ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ರಾಜಾಹುಲಿಯಿದ್ದಂತೆ, ಹುಲಿಗೆ ಇನ್ ಡೈರೆಕ್ಟ್ ಆಡಳಿತ ಮಾಡಿ ಅಭ್ಯಾಸವಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಅಲ್ಲದೇ ಯಡಿಯೂರಪ್ಪ ಮಗ ವಿಜೆಯೇಂದ್ರ ಸೂಪರ್ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಲ್ಲರ ಕಾಲದಲ್ಲೂ ಕೂಡ ಇಂತಾ ಮಾತು ಕೇಳಿಬಂದಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಆಡಳಿತದಲ್ಲಿದ್ದಾಗಲೂ ಈ ಮಾತುಗಳು ಕೇಳಿ ಬಂದಿತ್ತು. ಈ ತರಹ ಊಹಾಪೋಹ ಸಾಮಾನ್ಯ ಇದರಲ್ಲಿ ಯಾವುದೇ ತಿರುಳು, ಸತ್ಯವಿಲ್ಲ. ಯಡಿಯೂರಪ್ಪ ಪಕ್ಷದಲ್ಲಿ ಗಟ್ಟಿಯಾಗಿದ್ದಾರೆ ಅನ್ನೋ ನಿಟ್ಟಿನಲ್ಲಿ ಹುಲಿಗೆ ಹೋಲಿಕೆ ಮಾಡಿದರು.

Siddu BSY

ಇದೇ ವೇಳೆ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಾಗಿ ಜಿಲ್ಲೆಗೆ ಆಗಮಿಸಿದ ಸಚಿವರು, ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೂಮಳೆ ಪ್ರಕರಣದಿಂದ ಎಚ್ಚೆತ್ತು ಕಾರಿನಿಂದ ಇಳಿದು ಸಭೆ ನಡೆಸುವವರೆಗೂ ಸಾಮಾಜಿಕ ಅಂತರದ ಮಂತ್ರ ಜಪಿಸಿದರು. ಕಾರಿನಿಂದ ಇಳಿದು ಹ್ಯಾಂಡ್ ಸ್ಯಾನಿಟೈಸರ್ ಬಳಸಿ, ಯಾರೊಂದಿಗೂ ಕೈ ಕುಲಕದೇ ಸಾಮಾಜಿಕ ಅಂತರವಿರಲಿ, ಸಾಮಾಜಿಕ ಅಂತರವಿರಲಿ ಎಂದು ಹೇಳುತ್ತಾ ಮುಂದೆ ಸಾಗಿದರು.

R. Ashok A

ಸಭೆಯಲ್ಲಿ ಇಲಾಖೆಗೆ ಸಂಬಂಧಪಡದ ಅಧಿಕಾರಿಗಳಿ ಭಾಗಿಯಾಗುವುದು ಬೇಡ. ಎರಡನೇ ಹಂತದ ಅಧಿಕಾರಿಗಳು ಇರುವುದು ಬೇಡ. ಎಲ್ಲರೂ ದೂರ-ದೂರ ಕುಳಿತುಕೊಳ್ಳೋಣ ಎಂದು ಎಚ್ಚರಿಸಿ ಸಭೆ ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *