ಕೊಪ್ಪಳ: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಲೂಟಿ ಹೊಡೆದ ದುಡ್ಡು ತೆಗೆದುಕೊಂಡು ಬಂದು ಕುಳಿತಿದ್ದಾನೆ. ವಿಜಯೇಂದ್ರ ತಂದಿರುವ ದುಡ್ಡು ಯಡಿಯೂರಪ್ಪನವರದ್ದಲ್ಲ, ಲೂಟಿ ಹೊಡೆದ ದುಡ್ಡು ಎಂದು ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದರು.
ಮಸ್ಕಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜಿಲ್ಲೆಯ ತುರ್ವಿಹಾಳ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡರೆ, ಆತನ ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಾನೆ. ಆತ ಏನೂ ಅಲ್ಲ, ಆದರೂ ದುಡ್ಡು ತೆಗೆದುಕೊಂಡು ಬಂದಿದ್ದಾನೆ. ಅದು ಲೂಟಿ ಹೊಡೆದ ದುಡ್ಡು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಈ ಉಪಚುನಾವಣೆ ಅಗತ್ಯವಿರಲಿಲ್ಲ, ಐದು ವರ್ಷಗಳ ಕಾಲ ಪ್ರತಿನಿಧಿಯಾಗಿರಲು ಪ್ರತಾಪಗೌಡರನ್ನು ಗೆಲ್ಲಿಸಿದ್ದರು. ಕಾಂಗ್ರೆಸ್‍ನಲ್ಲಿ ಶಾಸಕರಾಗಿರೋದು ಬಿಟ್ಟು, ತಮ್ಮನ್ನು ತಾವು ಮಾರಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಇದು ನಿಮಗೆ ಒಪ್ಪಿಗೇನಾ? 30 ಕೋಟಿ ರೂ.ಗಾಗಿ ಪ್ರತಾಪಗೌಡ ಮಾರಾಟವಾಗಿದ್ದಾರೆ. ಮಾನ, ಮರ್ಯಾದೆ ಏನಾದರೂ ಇದೇನಾ? ನಿಮ್ಮ ಸ್ವಾಭಿಮಾನವನ್ನು ಮಾರಾಟ ಮಾಡಿದ್ದಾರೆ. ಸಂತೆಯಲ್ಲಿ ಪ್ರಾಣಿಗಳು ಮಾರಾಟ ಆಗುತ್ತವೆ, ಮನುಷ್ಯರೇ ವ್ಯಾಪಾರ ಆಗುತ್ತಾರೆ. ಒಬ್ಬ ಎಂಎಲ್‍ಎ 30 ಕೋಟಿ ತೆಗೆದುಕೊಂಡು ವ್ಯಾಪಾರ ಆಗುತ್ತಾರೆ ಎಂದರೆ ಏನು ಎಂದು ಪ್ರಶ್ನಿಸಿದರು.
Advertisement
2018ರಲ್ಲಿ ಪ್ರತಾಪಗೌಡರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲು ಬೇಡ ಎಂದಿದ್ದೆ, ಪ್ರತಾಪಗೌಡ ಕಳ್ಳನ ತರಹ ಕಂಡಿದ್ದ. ಮಸ್ಕಿ ಕ್ಷೇತ್ರಕ್ಕೆ 5 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಇಡೀ ಕ್ಷೇತ್ರದ ಜನ ಬಿಜೆಪಿಗೆ ಹೋಗು ಎಂದಿದ್ದರೆ ಆ ಮಾತು ಬೇರೆ, ಪ್ರತಾಪಗೌಡ ಹೇಳದೆ, ಕೇಳದೆ ಹೋದಿಯಲಪ್ಪ. ನನ್ನನ್ನು, ಕ್ಷೇತ್ರದ ಜನರನ್ನು ಕೇಳಲಿಲ್ಲ. ನಿಮ್ಮೆಲ್ಲರನ್ನೂ ಮಾರಾಟ ಮಾಡಿ, ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಹರಿಹಾಯ್ದರು.
Advertisement
ಎರಡು ವರ್ಷದಿಂದ ಯಡಿಯೂರಪ್ಪ ಸರ್ಕಾರ ಏನಾದರೂ ಮಾಡಿದೇನಾ ಎಂದು ಪ್ರಶ್ನಿಸಿದ ಸಿದ್ದು, ಮೋದಿ ಮಹಾನ್ ಸುಳ್ಳುಗಾರ, ಅಂತಹ ಸುಳ್ಳು ಹೇಳುವವರನ್ನು ನಾನು ನೋಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಕಾರ್ಯರ್ತರು ನೀಡಿದ 25 ಸಾವಿರ ರೂ.ಗಳನ್ನು ಸಿದ್ದರಾಮಯ್ಯನವರು ಬಸನಗೌಡಗೆ ನೀಡಿದರು. ವಿಜಯೋತ್ಸವ ಮಾಡಲು ಬರುತ್ತೇನೆ ಎಂದು ಹೇಳಿದರು.