– ಉತ್ತಮ ಆರಂಭ ಕಂಡರೂ ಮಕಾಡೆ ಮಲಗಿದ ಕಿಂಗ್ಸ್
ಅಬುಧಾಬಿ: ಇಂದು ನಡೆದ ಐಪಿಎಲ್-2020 21ನೇ ಮ್ಯಾಚಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ 10 ರನ್‍ಗಳ ರೋಚಕ ಜಯ ಸಾಧಿಸಿದೆ.
ಇಂದು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ರಾಹುಲ್ ತ್ರಿಪಾಠಿಯವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 167 ರನ್ ಸಿಡಿಸಿತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ತಂಡ ಉತ್ತಮ ಆರಂಭ ಪಡೆದರು ಕೂಡ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ನಿಗಧಿತ 20 ಓವರಿನಲ್ಲಿ 157 ರನ್ ಸಿಡಿಸಿತು. ಈ ಮೂಲಕ 10 ರನ್‍ಗಳಿಂದ ಕೋಲ್ಕತ್ತಾ ತಂಡ ಜಯಗಳಿಸಿತು.
Advertisement
That's that from Match 21. @KKRiders win by 10 runs against #CSK.#Dream11IPL pic.twitter.com/wji9rmsowC
— IndianPremierLeague (@IPL) October 7, 2020
Advertisement
ಚೆನ್ನೈ ಮಿಡಲ್ ಆರ್ಡರ್ ಫ್ಲಾಪ್
ಇಂದು ಮೊದಲ ವಿಕೆಟ್ ಬೇಗ ಬಿದ್ದರೂ ನಂತರ ಎರಡನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದ ಅಂಬಾಟಿ ರಾಯುಡು ಮತ್ತು ವ್ಯಾಟ್ಸನ್ ಅವರು ಚೆನ್ನೈ ತಂಡವನ್ನು ಉತ್ತಮ ಸ್ಥಿತಿಗೆ ತಂದಿದ್ದರು. ಆದರೆ ನಂತರ ರಾಯುಡು 30 ರನ್ ಗಳಿಸಿ ಔಟ್ ಆದರು. ಅವರ ನಂತರ 50 ರನ್ ಗಳಿಸಿದ್ದ ವ್ಯಾಟ್ಸನ್ ಕೂಡ ಪೆವಿಲಯನ್ ಸೇರಿದರು. ಆಗಲು ಕೂಡ 104 ರನ್‍ಗಳಿಸಿದ್ದ ಚೆನ್ನೈ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆ ನಂತರ ಬಂದ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಧೋನಿ ಸ್ಯಾಮ್ ಕರ್ರನ್ ಅವರು ಔಟ್ ಆದರು. ಈ ಕಾರಣದಿಂದ ಚೆನ್ನೈ ಹೀನಾಯ ಸೋಲನ್ನು ಅನುಭವಿಸಿತು.
Advertisement
Another big wicket in the bag for #KKR.
Chakravarthy strikes. MS Dhoni departs. https://t.co/t7AbaZK1gI #Dream11IPL pic.twitter.com/SilvHku1vw
— IndianPremierLeague (@IPL) October 7, 2020
Advertisement
ಕೋಲ್ಕತ್ತಾ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟಲು ಅನುಭವಿ ಓಪನರ್ ಗಳಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಅವರು ಕಣಕ್ಕಿಳಿದಿದ್ದರು. ಕಳೆದ ಪಂದ್ಯದಲ್ಲಿ ಔಟ್ ಆಗದೇ ಆಟವಾಡಿದ್ದ ಈ ಜೋಡಿಯ ಮೇಲೆ ಭಾರಿ ನೀರಿಕ್ಷೆಗಳು ಇದ್ದವು. ಆದರೆ ಚೆನ್ನೈ ಆರಂಭಿಕ ಆಘಾತ ನೀಡಿದ ಯುವ ವೇಗಿ ಶಿವಂ ಮಾವಿ ಉತ್ತಮ ಲಯದಲ್ಲಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಔಟ್ ಸ್ವಿಂಗ್ ಎಸೆತದ ಮೂಲಕ ಔಟ್ ಮಾಡಿದರು. ಈ ಮೂಲಕ 17 ರನ್ ಗಳಿಸಿದ್ದ ಫ್ಲೆಸಿಸ್ ಅವರು ಔಟ್ ಆಗಿ ಹೊರನಡೆದರು.
Narine gets the big wicket of Shane Watson, who departs straight after scoring his half-century.
Big breakthrough #Dream11IPL #KKRvCSK pic.twitter.com/DfSQ66zXvK
— IndianPremierLeague (@IPL) October 7, 2020
ನಂತರ ಅಂಬಾಟಿ ರಾಯುಡು ಹಾಗೂ ವ್ಯಾಟ್ಸನ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡು 54 ರನ್ ಪೇರಿಸಿತ್ತು. ಉತ್ತಮ ಜೊತೆಯಾಟವಾಡಿದ ರಾಯುಡು ಹಾಗೂ ವ್ಯಾಟ್ಸನ್ 34 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ನಂತರ 27 ಬಾಲಿಗೆ ಮೂರು ಬೌಂಡರಿ ಸಮೇತ 30 ರನ್ ಭಾರಿಸಿದ್ದ ರಾಯುಡು 12ನೇ ಓವರಿನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು.
FIFTY!
Shane Watson gets to his 21st IPL half-century.
Live – https://t.co/t7AbaZK1gI #Dream11IPL pic.twitter.com/0lHL5miXjM
— IndianPremierLeague (@IPL) October 7, 2020
ನಂತರ 39 ಬಾಲಿಗೆ ಅರ್ಧಶತಕ ಸಿಡಿಸಿದ ಶೇನ್ ವ್ಯಾಟ್ಸನ್ ಅವರು ನಂತರ ಎಸೆತದಲ್ಲಿ ಸುನಿಲ್ ನರೈನ್ ಅವರಿಗೆ ಔಟ್ ಆಗಿ ಹೊರನಡೆದರು. 40 ಎಸೆತದಲ್ಲಿ ಒಂದು ಸಿಕ್ಸ್ ಮತ್ತು ಆರು ಫೋರ್ ಸಿಡಿಸಿ 50 ರನ್ ಬಾರಿಸಿದ್ದ ವ್ಯಾಟ್ಸನ್ ಅವರು ತಂಡ 103 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಔಟ್ ಆದರು. ಇಂದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಧೋನಿ 16ನೇ ಓವರಿನ 3ನೇ ಬಾಲಿನಲ್ಲಿ ವರುಣ್ ಚಕ್ರವರ್ತಿ ಬೌಲ್ಡ್ ಆಗಿ ವಾಪಸ್ ಆದರು.
A solid 50-run partnership comes up between @ShaneRWatson33 & @RayuduAmbati.#Dream11IPL pic.twitter.com/zgBkOCyFka
— IndianPremierLeague (@IPL) October 7, 2020
ನಂತರ ಸ್ಫೋಟಕ ಆಟಕ್ಕೆ ಮುಂದಾದ ಸ್ಯಾಮ್ ಕರ್ರನ್ ಅವರು ಆಂಡ್ರೆ ರಸ್ಸೆಲ್ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಮೂರು ಓವರಿಗೆ 39 ರನ್ ಬೇಕಿದ್ದಾಗ ಒಂದಾದ ಕೇದರ್ ಜಾಧವ್ ಮತ್ತು ರವೀಂದ್ರ ಜಡೇಜಾ ಮೋಡಿ ಮಾಡಲಿಲ್ಲ. ಈ ಕಾರಣದಿಂದ ಚೆನ್ನೈ ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯವನ್ನು ಕೈಚೆಲ್ಲಿತು.