ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಜಯಂತಿ ಅವರ ನಿಧನ ಕುರಿತಾಗಿ ಹಿರಿಯ ಪತ್ರಕರ್ತ ಗಣಪತಿ ಅವರು ಸಂತಾಪ ಸೂಚಿಸಿದ್ದಾರೆ. ಜಯಂತಿ ಅವರ ಕುರಿತಾಗಿ ಯಾರಿಗೂ ತಿಳಿಯದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಜಯಂತಿ ಅವರ ಬಗ್ಗೆ ಮಾತನಾಡುವಾಗ ಅನೇಕ ಹಿರಿಯ ಕಲಾವಿದರು ನೆನೆಪಾಗುತ್ತಾರೆ. ಪ್ರತಿಭೆ ಇದ್ದರೆ ಸಾಲದು ವ್ಯವಹಾರಿಕ ಬುದ್ದಿಯೂ ಇರಬೇಕು. ಅವರ ಜೀವನದೂದ್ದಕ್ಕೂ ನೋವಿನಲ್ಲಿಯೆ ಕಳೆದರು. ತನಗಾಗಿ ಏನನ್ನೂ ಮಾಡಲಿಲ್ಲ ಅವರು ಅವರಿಂದ ಇಂದಿನ ಪೀಳಿಗೆಯ ಜನತೆ ಕಲಿಯಬೇಕಾದದ್ದೂ ಸಾಕಷ್ಟಿದೆ ಎಂದಿದ್ದಾರೆ.
Advertisement
Advertisement
ಅವರು ಒಳ್ಳೆಯ ಪಾತ್ರಗಳನ್ನು ಸಿನಿಮಾದಲ್ಲಿ ಮಾಡಿದ್ದಾರೆ. ಜಯಂತಿ ಅವರು ಬಹಳ ಮುಗ್ಧ ಹೆಣ್ಣು ಮಗಳಾಗಿದ್ದರು. ಅವರ ಅತೀಯಾದ ಮುಗ್ಧತೆ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಯಿತ್ತು. ಇಂದು ಸಿಗುವ ಅಕಾಶಗಳನ್ನು, ಅಂಗಾಂಗಳನ್ನು ಬಳಸಿಕೊಂಡಿ ಆರ್ಥಿಕವಾಗಿ ಹೇಗೆ ಗಟ್ಟಿಯಾಗುವುದು ಎಂದು ಇಂದಿನ ಬಹುತೇಕ ಕಾಲವಿದರು ನೋಡುತ್ತಾರೆ. ಕಲಾವುದನಾಗುವುದು ಮುಖ್ಯವಲ್ಲ ಅವರು ಸಂಪಾದಿಸಿದ ಅಭಿಮಾನ, ಗೌರವವನ್ನು ಹೇಗೆ ಉಳಿಸಿಕೊಂಡು ಗೌರವಕ್ಕೆ ತಕ್ಕವಾಗಿ ಬದುಕುವುದು ಹೇಗೆ ಎನ್ನುವುದು ಮುಖ್ಯವಾಗುತ್ತದೆ. ರಾಜ್‍ಕುಮಾರ್ ಅವರು ಒಂದು ರೂಪಾಯಿಯನ್ನು ಜೇಬಿನಲ್ಲಿ ಇಟ್ಟುಕೊಂಡು ಇರುತ್ತಿರಲಿಲ್ಲ. ಯಾಕೆಂದ್ರೆ ಈ ಲೌಕಿಕ ಜೀವನ ನನ್ನನ್ನು ಹಾಳುಮಾಡುತ್ತದೆ ಎನ್ನುವ ಅರಿವು ಅವರಿಗಿತ್ತು. ಆದರೆ ಜಯಂತಿ ಅವರಿಗೆ ವ್ಯವಹಾರರವೇ ಗೊತ್ತಿರಲಿಲ್ಲ. ಎಲ್ಲರನ್ನೂ ನಂಬಿದರೂ, ನಂಬಿ ಕೆಟ್ಟವರಿಲ್ಲ ಎಂದು ಹೇಳುತ್ತಾರೆ. ಆದರೆ ನಂಬಿ ಕೆಟ್ಟವರು ಅಂತ ಕನ್ನಡ ಚಿತ್ರರಂಗದಲ್ಲಿ ಯಾರಾದರೂ ಇದ್ದರೆ ಅದು ಜಯಂತಿಯವರು ಮಾತ್ರ ಎಂದು ಹೇಳಿ ಬೇಸರ ವ್ಯಕ್ತಪಡಿದಿದ್ದಾರೆ.
Advertisement
ಜಯಂತಿ ಅವರಿಗೆ ಮೋಸವಾಗಿದೆ. ಅವರು ಹಸಿ ಹಸಿಯಾಗಿ ಬಲಿಯಾದರು. ಆದರೆ ನಾನು ಹೀಗೆ ಆದರೆ ಎಂದೂ ಯಾವತ್ತೂ ಹೇಳಿಲ್ಲ. ಜಯಂತಿ ಅವರು ಎಲ್ಲ ನೋವನ್ನು ತಾನೇ ನುಂಗಿಕೊಂಡು ಚೆಂದವಾಗಿ ಜೀವನ ನಡೆಸಿದರು. ಅವರು ಮಾಡದ ಪಾತ್ರಗಳಿಲ್ಲ, ಅವರು ಮಾಡಿರುವ ಪ್ರತಿಯೊಂದು ಪಾತ್ರವೂ ಒಂದು ಅಧ್ಯಯನಕ್ಕೆ ಬಳಸಿಕೊಳ್ಳಬುಹುದಾಂತಹ ಪಾತ್ರಗಳಾಗಿವೆ ಎಂದು ಜಯಂತಿ ಅವರನ್ನು ಬಣ್ಣಿಸಿದರು.
ರಾಜ್‍ಕುಮಾರ್ ಅವರ ಜೊತೆಗೆ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್‍ಕುಮಾರ್ ಅವರು ಅತ್ಯಂತ ಗೌರವಯುತವಾಗಿ ಇವರೊಂದಿಗೆ ನಡೆದುಕೊಂಡಿದ್ದಾರೆ. ಆದರೆ ಉಳಿದವರು ಜಯಂತಿ ಅವರ ರೂಪ, ಸ್ವರೂಪವನ್ನು ಕುಕ್ಕಿ ಕುಕ್ಕಿ ಪಡೆದುಕೊಂಡರು. ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು ಎನ್ನುವುದನ್ನು ಅವರ ಕಲಾವಿದರ ಒಡನಾಟದ ಬದುಕು ಕೊಟ್ಟಿಲ್ಲ. ಮಹಾನ್ ಕಲಾವಿದೆ ಬಾಡಿಗೆ ಮನೆಯಲಿ ಇದ್ದರು ಎಂದು ನೆನಪಿಸಿಕೊಂಡರು.