ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಸರ್ವ ಪಕ್ಷ ಸಭೆ ಕರೆಯಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.
ಉಪ ಚುನಾವಣೆ ನಂತರ ಅಂದರೆ ಏಪ್ರಿಲ್ 17ರ ನಂತರ ಸರ್ವ ಪಕ್ಷ ಸಭೆ ನಡೆಯಬಹುದು. ಸಭೆಯಲ್ಲಿ ಕೊರೋನಾ ನಿಯಂತ್ರಣ, ನೈಟ್ ಕರ್ಫ್ಯೂ, ಲಾಕ್ ಡೌನ್ ಸಾಧ್ಯತೆ ಸೇರಿದಂತೆ ಎಲ್ಲದರ ಬಗ್ಗೆ ಸಿಎಂ ಚರ್ಚೆ ಮಾಡಲಿದ್ದಾರೆ.
ಸರ್ವ ಪಕ್ಷಗಳ ಸಭೆಯಲ್ಲಿ ನಾಯಕರ ನಿರ್ಧಾರವನ್ನು ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಈಗಾಗಲೇ ಲಾಕ್ ಡೌನ್ ಪರವಾದ ಒಲವು ವ್ಯಕ್ತಪಡಿಸಿದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನೂ, ಗಮನದಲ್ಲಿಟ್ಟುಕೊಂಡು ಸರ್ವ ಪಕ್ಷಗಳ ಸಭೆ ನಡೆಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ನೈಟ್ ಕರ್ಫ್ಯೂ ಮುಂದುವರಿಕೆ, ಅಗತ್ಯ ಬಿದ್ದರೆ ವೀಕೆಂಡ್ ಲಾಕ್ ಡೌನ್ ಅಥವಾ ನಿರ್ದಿಷ್ಟ ಅವಧಿಯ ಲಾಕ್‍ಡೌನ್.. ಹೀಗೆ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿ, ವಿಪಕ್ಷಗಳ ಸಲಹೆ ಪಡೆಯಲು ಸಿಎಂ ಮುಂದಾಗಿದ್ದಾರೆ ಅಂತ ತಿಳಿದು ಬಂದಿದೆ.
ಕೊರೊನಾ ಹೆಚ್ಚಿರುವ ರಾಜ್ಯಗಳ ಸಿಎಂಗಳಿಗೆ ಸರ್ವ ಪಕ್ಷ ಸಭೆ ಕರೆದು ಎಲ್ಲರ ಸಲಹೆ-ಸೂಚನೆ ಪಡೆಯುವಂತೆ ಪ್ರಧಾನಿ ಮೋದಿ 11 ರಾಜ್ಯಗಳಿಗೆ ಸೂಚಿಸಿದ್ದರು.